ಬಂಟ್ವಾಳ: ಕಲ್ಲಡ್ಕ ಬೊಂಡಾಲದ ಮಹಿಳೆಯೊಬ್ಬರಿಗೆ ಜೂ.11ರಂದು ಬೇಲೂರು ಮೂಲದ ಆಟೋ ಚಾಲಕ ಪ್ರಮೋದ್ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯು ಜೂನ್ 11ರಂದು ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದಾಗ ಬಂದು ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾನೆ.
ಮಹಿಳೆ ಬೊಬ್ಬೆ ಹಾಕಿದಾಗ ಮನೆಯ ಸಮೀಪದಲ್ಲೇ ಇದ್ದ ಆಕೆಯ ಗಂಡ ಓಡಿ ಬಂದಿದ್ದು, ಆಗ ಆರೋಪಿಯು ಜೀವ ಬೆದರಿಕೆ ಒಡ್ಡಿ ಹೋಗಿದ್ದ.
ಸಂತ್ರಸ್ತೆಯ ತಾಯಿ ಮನೆ ಬೇಲೂರಿನಲ್ಲಿದ್ದು, ಹೀಗಾಗಿ ಆಕೆ ಒಂದೆರಡು ಬಾರಿ ಪ್ರಮೋದ್ನ ರಿಕ್ಷಾದಲ್ಲಿ ಬೊಂಡಾಲಕ್ಕೆ ಬಂದಿದ್ದರು. ಈ ರೀತಿ ಪರಿಚಯವಾಗಿ ಈ ಹಿಂದೆಯೂ ಆತ ಒಂದೆರಡು ಬಾರಿ ಬಂದು ಕಿರುಕುಳ ನೀಡಿ ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.