ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಎನ್ನಲಾಗುತ್ತೆ. ಅಂದ್ರೆ ನಾವು ನೀವು ಸೇರಿ ನಿಶ್ಚಯ ಮಾಡುವುದಲ್ಲ ಬದಲಿಗೆ ದೇವ ಆಶೀರ್ವಾದವೇ ಮದುವೆಗೆ ಕಾರಣ ಎನ್ನಲಾಗಯತ್ತೆ. ಹೀಗಾಗಿ ಇಲ್ಲೊಂದು ಜೋಡಿ ಸಹ ದೇವರ ನಿಶ್ಚಯದಂತೆ ಮದುವೆಯಾದಂತಿದೆ. ಇವರು ವಿಶ್ವದ ಅತ್ಯಂತ ಕುಳ್ಳಗಿನ ದಂಪತಿಯಾಗಿದ್ದಾರೆ.
ದಕ್ಷಿಣ ಅಮೆರಿಕಾದ ಬ್ರೆಜಿಲ್‌ನ ಪಾಲೊ ಗೇಬ್ರಿಯಲ್ ಡ ಸಿಲ್ವಾ ಬ್ಯಾರೋಸ್ ಮತ್ತು ಕಟ್ಯೂಸಿಯಾ ಲೀ ಹೋಶಿನೊ ಈಗ ಮದುವೆಯಾಗಿ ವಿಶ್ವದ ಅತ್ಯಂತ ಕುಳ್ಳಗಿನ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಅಮೆರಿಕಾದ ಬ್ರೆಜಿಲ್‌ನ ಪಾಲೊ ಗೇಬ್ರಿಯಲ್ ಡ ಸಿಲ್ವಾ ಬ್ಯಾರೋಸ್ ಮತ್ತು ಕಟ್ಯೂಸಿಯಾ ಲೀ ಹೋಶಿನೊ ಅವರು 2006 ರಲ್ಲಿ ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರು. ಹೀಗೆ ಭೇಟಿಯಾಗಿದ್ದ ಅವರು ಮೊದಲು ಉತ್ತಮ ಸ್ನೇಹಿತರಾಗಿದ್ದರು, ಬರೋಬ್ಬರಿ 10 ವರ್ಷಕ್ಕೂ ಅಧಿಕ ಕಾಲ ಇಬ್ಬರು ಒಟ್ಟಿಗೆ ಇದ್ದರು ಆದರೆ ಈಗ ಮದುವೆಯಾಗಿ ತಮ್ಮ ಸಂಬಂಧಕ್ಕೆ ಉತ್ತಮ ಅರ್ಥ ನೀಡಿದ್ದಾರೆ. ಪಾಲೊ ಗೇಬ್ರಿಯಲ್ ಅವರಿಗೆ ಈಗ 31 ವರ್ಷವಾಗಿದ್ದರೆ ಕಟ್ಯೂಸಿಯಾ ಲೀಗೆ 28 ವರ್ಷವಾಗಿದೆ.
ಮದುವೆಯ ನಂತರ, ದಂಪತಿ ಭೂಮಿಯ ಮೇಲಿನ ಅತ್ಯಂತ ಕುಳ್ಳಗಿರುವ ವಿವಾಹಿತ ಜೋಡಿ ಎಂಬ ಸಾಧನೆ ಮಾಡಿದರು. ಈ ಇತ್ತೀಚಿನ ವರದಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಪುಟದಲ್ಲಿ ಸೇರಿಸಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ದಂಪತಿಗಳು ಒಟ್ಟಿಗೆ ಇರಲು ತುಂಬಾ ಸಂತೋಷವಾಗಿದೆ ಮತ್ತು ಜೀವನದಲ್ಲಿ ಎಲ್ಲಾ ಸವಾಲುಗಳನ್ನು ಒಟ್ಟಿಗೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ‘ನಾವು ಚಿಕ್ಕ ದೇಹದ ಗಾತ್ರ ಹೊಂದಿರಬಹುದು ಆದರೆ ನಾವು ದೊಡ್ಡ ಹೃದಯವನ್ನು ಹೊಂದಿದ್ದೇವೆ ಮತ್ತು ಪರಸ್ಪರ ಮತ್ತು ನಮ್ಮ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಾಕಷ್ಟು ಪ್ರೀತಿಯನ್ನು ಹೊಂದಿದ್ದೇವೆ. ನಮ್ಮ ಜೀವನವು ಅದರ ಸವಾಲುಗಳಿಲ್ಲದೆಯೇ ಇಲ್ಲ ಆದರೆ ನಾವು ಈ ಸವಾಲುಗಳನ್ನು ಒಟ್ಟಿಗೆ ನಿಭಾಯಿಸಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪೆಲೊ ಅವರ ಎತ್ತರ 90.28 ಸೆಂ. ಮೀಟರ್ ಹಾಗೂ ಕಟ್ಯೂಸಿಯಾ ಎತ್ತರ 91.13 ಸೆಂ. ಮೀಟರ್ ಆಗಿದೆ ಎಂದು ಪೋಸ್ಟ್ ಮೂಲಕ ಹಂಚಿಕೊಳ್ಳಲಾಗಿದೆ. ಇಡೀ ವಿಶ್ವದಲ್ಲಿ ಇದಕ್ಕಿಂತ ಕುಳ್ಳಗಿರುವ ದಂಪತಿ ಇನ್ನೂ ಯಾರು ಇಲ್ಲ ಎಂದು ತಿಳಿದುಬಂದಿದೆ.
ಈ ಪೋಸ್ಟ್ ನೋಡಿದ ಮಂದಿ ನವ ದಂಪತಿಗೆ ಶುಭಾಶಯಗಳ ಹೇಳಿದ್ದಾರೆ. ಈ ಜೋಡಿ ತುಂಬಾನೆ ಚೆನ್ನಾಗಿದೆ. ಇದೇ ರೀತಿ ನೂರು ವರ್ಷ ಬದುಕಿ ಬಾಳಿ ಎಂದು ಹರಸಿದ್ದಾರೆ. ಮತ್ತೆ ಕೆಲವರು ಸೌಂದರ್ಯ ಅನ್ನೋದು ನಾವು ನೋಡುವ ಕಣ್ಣಿನಲ್ಲಿ ಇದೆಯೇ ಹೊರತು ಬೇರೊಬ್ಬರ ಮುಖದಲ್ಲಿ ಇಲ್ಲ ಎನ್ನುವುದನ್ನು ಈ ಜೋಡಿ ನಿರೂಪಿಸಿದೆ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಇವರಿಬ್ಬರ ಈ ಪ್ರೇಮ ಕಥೆ ಬಹಳ ಸ್ಪೂರ್ತಿದಾಯಕವಾಗಿದೆ. 10 ವರ್ಷ ಜೊತೆಗಿದ್ದು ಈಗ ಮದುವೆಯಾಗುತ್ತಿರುವ ಈ ಜೋಡಿ, ಹಣ, ಸೌಂದರ್ಯಕ್ಕೆ ಮನಸೋಲುವ ಒಂದಿಷ್ಟು ಮಂದಿಗೆ ಸ್ಪೂರ್ತಿಯಾಗಲಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಭಾರತದಲಲ್ಲೂ ಈ ರೀತಿಯ ಮಹಿಳೆ ಇದ್ದಾರೆ. ನಾಗ್ಪುರದ ಜ್ಯೋತಿ ಕಿಶನ್‌ಜಿ ವಿಶ್ವದ ಅತ್ಯಂತ ಕುಳ್ಳಗಿರುವ ಮಹಿಳೆಯಾಗಿದ್ದಾರೆ. ಅವರು ಕೇವಲ 68.8 ಸೆಂ. ಮೀಟರ್ ಎತ್ತರವಿದ್ದು, 31 ವರ್ಷದವರಾಗಿದ್ದಾರೆ. ಪ್ರಿಮೋರ್ಡಿಯಲ್ ಡ್ವಾರ್‌ಫಿಸಮ್ ಎಂಬ ಅನುವಂಶೀಯ ಕಾಯಿಲೆಯಿಂದಾಗಿ ಈ ರೀತಿಯ ಮಗು ಜನನವಾಗುತ್ತದೆ. ಆದರೆ ಹುಟ್ಟುವಾಗ ಈ ಕಾಯಿಲೆ ಲಕ್ಷಣ ಅಷ್ಟೊಂದು ತಿಳಿಯುವುದಿಲ್ಲ. ಆದರೆ ಬರು ಬರುತ್ತಾ ಅವರ ಬೆಳವಣಿಗೆ ನಿಂತುಬಿಡುತ್ತದೆ.