ನೆಲ್ಯಾಡಿ: ನಲ್ಯಾಡಿ ಜೇಸಿಐ ಸಂಸ್ಥೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನೆಲ್ಯಾಡಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕ ಶೀನಪ್ಪ ಗೌಡ ರವರು ಮಾತಾಡಿ ಜಗತ್ತಿಗೆ ಕೊಡುಗೆಯಾಗಿ ನೀಡಿದ ಯೋಗದ ಪರಿಣಾಮಗಳು, ಪ್ರಯೋಜನಗಳನ್ನ ಶಿಬಿರಾರ್ಥಿಗಳಿಗೆ ತಿಳಿಸಿದರು. ಜೇಸಿಐ ಸಂಸ್ಥೆಯ ಅಧ್ಯಕ್ಷೆ ಸುಚಿತ್ರಾ ಬಂಟ್ರಿಯಾಲ್ ಅವರು ಯೋಗಾಸನದ ಪ್ರಯೋಜನಗಳನ್ನ ತಿಳಿಸಿ ಪ್ರತಿನಿತ್ಯ ಯೋಗಾಸನ ಮಾಡಿದರೆ ಅರೋಗ್ಯವನ್ನು ಔಷಧಿಯಿಂದ ಮುಕ್ತರಾಗಿ, ಯಾವುದೇ ಅಡ್ಡ ಪರಿಣಾಮಗಳಿಂದ ತಪ್ಪಿಸಬಹುದು ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಶಿಕ್ಷಕಿ ವೀಣಾ ಡಿಸೋಜ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾಸಿರ್ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯನಂದ ಬಂಟ್ರಿಯಾಲ್ ಉಪಸ್ಥಿತರಿದ್ದರು.
300 ವಿದ್ಯಾರ್ಥಿಗಳು ಯೋಗ ಶಿಕ್ಷಕ ಶೀನಪ್ಪ ಗೌಡ ಅವರಿಂದ ಯೋಗ ಶಿಕ್ಷಣ ಪಡೆದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು, ಭಾಗವಹಿಸಿದರು.
ಕಾರ್ಯಕ್ರಮದ ಮುಖ್ಯ ಶಿಕ್ಷಕಿ ವೀಣಾ ಡಿಸೋಜ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕ ವಿಮಲ್ ಕುಮಾರ್ ನಿರೂಪಿಸಿದರು.