ಕಡಬ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಪ್ರಾತ್ಯಕ್ಷಿಕೆ

ಶೇರ್ ಮಾಡಿ

ಕಡಬ: ಪಠ್ಯ ಪೂರಕ ಚಟುವಟಿಕೆಯ ಭಾಗವಾಗಿ ಇಕೋ ಕ್ಲಬ್ ವತಿಯಿಂದ ಸೈಂಟ್ ಆನ್ಸ್ ಮತ್ತು ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕೊಡಿಬೈಲು ದೇವಕಿ ಪೂಜಾರಿ ಇವರ ಮನೆಯ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಗದ್ದೆ ನಾಟಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಂ.ಸ್ವಾಮಿ ಪೌಲ್ ಪ್ರಕಾಶ್ ಡಿ’ಸೋಜ ರವರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಭತ್ತದ ಬೇಸಾಯವನ್ನು ಯಾವ ರೀತಿ ಮಾಡುವುದು ಹಾಗೂ ನಾಟಿ ಬಗ್ಗೆ ಹೆಚ್ಚಿನ ಕಲಿಕೆಗೆ ಪೂರಕವಾದ ಇದೊಂದು ಅವಕಾಶ ಎಂದು ನುಡಿದರು. ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂ.ಸ್ವಾಮಿ ಅಮಿತ್ ಪ್ರಕಾಶ್ ರೊಡ್ರಿಗಸ್. ಈ ಸಂದರ್ಭದಲ್ಲಿ ಕೊಡಿಬೈಲ್ ಮನೆಯ ದೇವಕಿ ಸುವರ್ಣ, ಸತೀಶ್, ಸಂತೋಷ್, ಹಾಗೂ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಾಗೂ ಕೆಸರಗದ್ದೆಯ ಕಾರ್ಯಕ್ರಮದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿದ ಶಿಕ್ಷಕ ಜಾನ್ ವೇಗಸ್ ರವರಿಗೆ ಸನ್ಮಾನ ಮಾಡಲಾಯಿತು ಹಾಗೂ ಕೆಲಸದಲ್ಲಿ ನುರಿತ ಮಹಿಳೆಯರಿಗೆ ಶಾಲು ಹೊದಿಸಿ ಗುರುತಿಸಲಾಯಿತು.

ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂ.ಸ್ವಾಮಿ ಅಮಿತ್ ಪ್ರಕಾಶ್ ರೊಡ್ರಿಗಸ್, ಇಕೋ ಕ್ಲಬ್ ಸಂಘದ ಮೇಲ್ವಿಚಾರಕರಾದ ಸಹ ಶಿಕ್ಷಕಿ ಶಾಂತಿ ಪ್ರಿಯ ಹಾಗೂ ಶಿಲ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಸುಪ್ರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಗ್ಗೆ ಕೆಸರು ಗದ್ದೆಗಿಳಿದ ವಿದ್ಯಾರ್ಥಿಗಳು ಗದ್ದೆ ಕೆಲಸದಲ್ಲಿ ನುರಿತ ಮಹಿಳೆಯರ ಮಾರ್ಗದರ್ಶನದಲ್ಲಿ ನೇಜಿ ತೆಗೆಯುವ, ನೇಜಿ ನಾಟಿ ಮಾಡುವ ಮೂಲಕ ಭತ್ತದ ಬೇಸಾಯದ ವಿವಿಧ ಹಂತದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಬಳಿಕ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕಬಡ್ಡಿ ಮುಂತಾದ ಅನೇಕ ಆಟಗಳನ್ನು ವಿದ್ಯಾರ್ಥಿಗಳು ಸಂಭ್ರಮಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಹಾಗೂ ಬೆಳಗಿನ ಉಪಹಾರ ಕೊಡಿಬೈಲು ಮನೆಯವರು ನೀಡಿದರು. ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!