ಕಡಬ ಸೈಂಟ್ ಜೋಕಿಮ್ಸ್ ಶಾಲೆಯ ಸಹಶಿಕ್ಷಕಿ ಮೆಟಿಲ್ಡಾ ಅಲ್ವಾರಿಸ್ ರವರಿಗೆ ವಿದಾಯಕೂಟ ಸಮಾರಂಭ

ಶೇರ್ ಮಾಡಿ

ಕಡಬ: ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸಹ ಶಿಕ್ಷಕಿ ಮೆಟಿಲ್ದಾ ಅಲ್ವಾರಿಸ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಸಮಾರಂಭವು ಸೈಂಟ್ ಜೋಕಿಮ್ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಂ. ಸ್ವಾಮಿ ಪೌಲ್ ಪ್ರಕಾಶ್ ಡಿ’ ಸೋಜ ಅವರು ಮೆಟಿಲ್ದಾ ರವರು ಶಿಕ್ಷಣ ಕ್ಷೇತ್ರದಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವುದು ಶ್ರೇಷ್ಠ ಸೇವೆ ಹಾಗೂ ಪಠ್ಯ ಸಹಪಠ್ಯ ಚಟುವಟಿಕೆಗಳೊಂದಿಗೆ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಿದ್ದನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಹರಿಪ್ರಸಾದ್ ಗೌಡ ಬ್ರಂತೋಡು ಅವರು ಮಕ್ಕಳ ಪ್ರಗತಿಯಲ್ಲಿ ಉತ್ತಮ ಸೇವೆಯನ್ನು ನೀಡಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು, ಪ್ರಾಥಮಿಕ ಹಂತದಲ್ಲಿ ಶಿಸ್ತಿನ ಬಗ್ಗೆ ಹೆಚ್ಚಿನ ಅರಿವುವನ್ನು ಮೂಡಿಸಿದ ಶಿಕ್ಷಕಿಯನ್ನು ಕೊಂಡಾಡಿದರು.

ಸನ್ಮಾನವನ್ನು ಸ್ವೀಕರಿಸಿದ ಮೆಟಿಲ್ಡಾ ಅಲ್ವಾರಿಸ್ ಅವರು ಕಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ರವರ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕೆ ಆಡಳಿತ ಮಂಡಳಿರವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು ಹಾಗೂ ಸೇವೆಯ ಅವಧಿಯಲ್ಲಿ ನನ್ನನ್ನು ಸಂಸ್ಥೆಯ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದನು ಶ್ಲಾಘಿಸಿದರು.

ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್ ಅವರು ಶಿಕ್ಷಕಿಯ ಕುರಿತು ತಮ್ಮ ಅನಿಸಿಕೆ ಹಂಚಿ, ಸಂಸ್ಥೆಗೆ ನೀಡಿದ ಸಹಕಾರ ಪ್ರೋತ್ಸಾಹ ಹಾಗೂ ಶಾಲಾ ಕೈತೋಟ ನಿರ್ಮಾಣ ಮೆಟ್ರಿಕ್ ಮೇಳ, ಜವಾಬ್ದಾರಿಯನ್ನು ಉತ್ತಮವಾಗಿ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂ.ಸ್ವಾಮಿ ಪ್ರಕಾಶ್ ರೊಡ್ರಿಗಸ್ , ಕಡಬ ಕ್ಲಸ್ಟರ್. ಸಿ ಆರ್ ಪಿ ಆನಂದ ಅಜಿಲ, ಸೈಂಟ್ ಜೋಕಿಮ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಫೆ ರ್ನಾಂಡಿಸ್, ಪಾಲನ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್ ಹಾಗೂ ವಿದ್ಯಾಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಶಿಕ್ಷಕ ವೃಂದ, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಮೈಮುನ ಹುಮೈನ ಮೆಟಿಲ್ಡಾ ಟೀಚರ್ ನೀಡಿದ ಪ್ರೀತಿಯ ಹಾಗೂ ಉತ್ತಮ ಶಿಕ್ಷಣವನ್ನು ನೀಡಿದ್ದಕ್ಕೆ ಶ್ಲಾಘಿಸಿದರು.

ಸಹಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿ, ಸಹ ಶಿಕ್ಷಕಿ ಸಿಸ್ಟರ್ ಗ್ರೆಟ್ಟಾ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಕುಮಾರಿ ಸಫ್ರೀನ್ ವಂದಿಸಿದರು.

Leave a Reply

error: Content is protected !!