ನೇಸರ ಫೆ.18: ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘ ಮತ್ತು ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡ ವಿತರಣಾ ಕಾರ್ಯಕ್ರಮ ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢಶಾಲೆಯಲ್ಲಿ ನಡೆಯಿತು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರವರು ಶಿಬಿರ ಉದ್ಘಾಟಿಸಿ ಶುಭಹಾರೈಸಿದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯರವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಶಾಂತರಾಜ್, ವೆನ್‌ಲಾಕ್ ಆಸ್ಪತ್ರೆಯ ಡಾ.ಲವಿನರವರು ಮಾಹಿತಿ ನೀಡಿದರು. ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಉಪಾಧ್ಯಕ್ಷ ಡಾ.ಹರಿದಾಸ ಭಟ್, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆಕಾಶ್, ಆಲಂಕಾರು ಗ್ರಾ.ಪಂ.ಪಿಡಿಒ ಜಗನ್ನಾಥ ರೈ, ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ನಾಗೇಶ್ ಕೆ., ಆಲಂಕಾರು ದುರ್ಗಾಂಬಾ ಪ್ರೌಢಶಾಲೆ ಮುಖ್ಯಗುರು ಶ್ರೀಪತಿ ರಾವ್, ಪ.ಪೂ.ಕಾಲೇಜಿನ ಪ್ರಾಂಶುಪಾಲ ನವೀನ್‌ರವರು ಶುಭಹಾರೈಸಿದರು.
ಒಕ್ಕಲಿಗ ಗೌಡ ಸಂಘ ಪುತ್ತೂರು ತಾಲೂಕು ಇದರ ಆಲಂಕಾರು ವಲಯ ಉಸ್ತುವಾರಿ ಚಕ್ರಪಾಣಿ ಬಾಕಿಲ ಸ್ವಾಗತಿಸಿ, ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಕಾರ್ಯದರ್ಶಿ ಪ್ರಕಾಶ್ ಬಾಕಿಲ ವಂದಿಸಿದರು. ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಬಾಕಿಲ ನಿರೂಪಿಸಿದರು. ಶಿಬಿರದಲ್ಲಿ 250ಕ್ಕೂ ಹೆಚ್ಚು ಮಂದಿಗೆ ಉಚಿತ ಕನ್ನಡಕ ವಿತರಣೆ, ಕಣ್ಣು ಪರೀಕ್ಷೆ ಮಾಡಲಾಯಿತು. 12 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಂಘದ ಶ್ರೀಧರ ಕಣಜಾಲು, ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದ ಹಿರಿಯ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಮರುವಂತಿಲ, ಈಶ್ವರ ಗೌಡ ಪಜ್ಜಡ್ಕ, ಆನಂದ ಗೌಡ ಪಜ್ಜಡ್ಕ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಸದಾನಂದ ಕುಂಟ್ಯಾನ, ದಯಾನಂದ ಗೌಡ ಆಲಡ್ಕ, ಪದ್ಮಪ್ಪ ಗೌಡ ರಾಮಕುಂಜ, ಕೇಶವ ಗೌಡ ಆಲಡ್ಕ, ಶಿವಣ್ಣ ಗೌಡ ಕಕ್ವೆ, ರಾಮಣ್ಣ ಗೌಡ ಸುರುಳಿ, ತಿಮ್ಮಪ್ಪ ಗೌಡ ಸಂಕೇಶ, ದಾಮೋದರ ಗೌಡ ಕಕ್ವೆ ಮತ್ತಿತರರು ಉಪಸ್ಥಿತರಿದ್ದರು.
41ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರನ್ನು ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಮಣ್ಣ ಬಿ.ದೋಳ ಪರಿಚಯಿಸಿದರು.
—ಜಾಹೀರಾತು—