ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಕೆಡಂಬೇಲು ಶ್ರೀ ಮಂಜುಶ್ರೀ ಭಜನಾ ಮಂದಿರದ 5 ನೇ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹಾಪೂಜೆ

ಶೇರ್ ಮಾಡಿ

ನೇಸರ ಫೆ.18:ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಕೆಡಂಬೇಲು ಶ್ರೀ ಮಂಜುಶ್ರೀ ಭಜನಾ ಮಂದಿರದ 5 ನೇ ವಾರ್ಷಿಕೋತ್ಸವ ಮತ್ತು ಆರಾಧ್ಯ ದೇವತೆ ಮಹಾಮ್ಮಾಯಿ ಅಮ್ಮನವರ ವರ್ಷಾವಧಿ ಮಹಾಪೂಜೆಯನ್ನು ಪರಮಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು ಇವರ ಕೃಪಾಶೀರ್ವಾದಗಳೊಂದಿಗೆ ,ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಇದರ ಮಾರ್ಗದರ್ಶನದಲ್ಲಿ ದಿನಾಂಕ 05.03.2022 ಶನಿವಾರ ಮತ್ತು 06.03.2022 ಆದಿತ್ಯವಾರ ದಂದು ಜರಗಲಿರುವುದು.ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 05.03.2022 ನೇ ಶನಿವಾರ

 

ಬೆಳಿಗ್ಗೆ ಗಂಟೆ 7-00 ಕ್ಕೆ

 ಗಣಪತಿ ಹೋಮ

 

 ಸಂಜೆ ಗಂಟೆ 6 .00 ಕ್ಕೆ

 

 ದುರ್ಗಾಪೂಜೆ

 

 ರಾತ್ರಿ ಗಂಟೆ 8 -00 ರಿಂದ

 

 ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ  ಮಹಾಪೂಜೆ  ಪ್ರಸಾದ ವಿತರಣೆ

 

ರಾತ್ರಿ ಗಂಟೆ 9-00 ಕ್ಕೆ

 

ಅನ್ನ ಸಂತರ್ಪಣೆ 

 ರಾತ್ರಿ ಗಂಟೆ 9-30 ಕ್ಕೆ

 

  ದೈವದ ಭಂಡಾರ ತೆಗೆಯುವುದು

 ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು

ದಿನಾಂಕ 06.03.2022 ನೇ ಆದಿತ್ಯವಾರ

 

 ಮಧ್ಯಾಹ್ನ ಗಂಟೆ 12 .00 ಕ್ಕೆ ಶ್ರೀ ಮಹಾಮ್ಮಾಯಿ ಅಮ್ಮನವರ ಮಹಾಪೂಜೆ

 ಮಧ್ಯಾಹ್ನ ಗಂಟೆ 1 .00 ಕ್ಕೆ  ಅನ್ನ ಸಂತರ್ಪಣೆ 

ಜಾಹೀರಾತು

Leave a Reply

error: Content is protected !!