ಹದಗೆಟ್ಟ ರಸ್ತೆ ಮಧ್ಯೆ ಬಾಳೆಯ ಕೃಷಿ….!!!

ಶೇರ್ ಮಾಡಿ

ನೇಸರ ಫೆ.19: ಭಾರತ ದೇಶದ ಹಳ್ಳಿಗಳು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿರುವ ಯುಗದಲ್ಲಿ ಇಲ್ಲೊಂದು ಅತ್ಯಂತ ಪ್ರಮುಖ ರಸ್ತೆ ಜನಪ್ರತಿನಿಧಿಗಳ,ಅಧಿಕಾರಿಗಳ ಆಡಳಿತದ ಬೇಜವಾಬ್ದಾರಿಯ ದಿವ್ಯ ನಿರ್ಲಕ್ಷತನಕ್ಕೆ ಒಳಗಾಗಿ ಜನರ ಹಿಡಿಶಾಪಕ್ಕೆ ತುತ್ತಾಗಿದೆ.

ಈ ರಸ್ತೆಯು ಕಡಬ ತಾಲೂಕಿಗೆ ಸೇರಿದಾಗಿರುತ್ತೆ,ಕಡಬ,ಪುತ್ತೂರು,ಬೆಳ್ತಂಗಡಿ ತಾಲೂಕನ್ನು ಸಂಪರ್ಕಿಸುವ ಅತಿ ಹತ್ತಿರದ ದಾರಿಯಾದ ನೆಲ್ಯಾಡಿಯಿಂದ ಕೊಕ್ಕಡಕ್ಕೆ ಹೋಗುವ ರಸ್ತೆ. ನೆಲ್ಯಾಡಿಯ ಪೋಲಿಸ್ ಸ್ಟೇಷನ್ ಮುಂಭಾಗದಿಂದ ಹಾದುಹೋಗಿ ಪುತ್ಯೆ ಸೇತುವೆಯ ವರೆಗೆ ರಸ್ತೆ ಡಾಮರೀಕರಣವಾಗದೆ ಹಲವು ವರ್ಷಗಳೇ ಸಂದಿವೆ.ಡಾಮರು ಕಿತ್ತುಹೋಗಿ ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ವಾಹನಗಳ ಚಕ್ರಕ್ಕೆ ಸಿಕ್ಕಿ ಎಸೆಯಲ್ಪಟ್ಟು ಯಾರದ್ದೋ ತಲೆಯೋ ಅಥವಾ ವಾಹನಗಳ ಗಾಜು ಯಾವಾಗ ಒಡೆಯುತ್ತದೆ ಗೊತ್ತಿಲ್ಲ. ಅಂತೂ ಈ ಭಾಗದ ಜನರ ತಾಳ್ಮೆ ಮೆಚ್ಚಲೇಬೇಕು.”ತಾಳಿದವನು ಬಾಳಿಯಾನು” ಎಂಬ ಗಾದೆ ಈಗ ಸುಳ್ಳಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ ಬಾಳಿಕೆ ಕಡಿಮೆ ಎಂಬುದು ನಿಜವಾಗುತ್ತಿದೆ.

ದಿನಾಲು ಈ ರಸ್ತೆಯಲ್ಲಿ ಸಾವಿರಾರು ಜನ ತಮ್ಮ ದಿನನಿತ್ಯದ ವ್ಯವಹಾರಗಳಿಗೆ ಸಂಚರಿಸುತ್ತಿದ್ದಾರೆ, ರಸ್ತೆ ಹದಗೆಟ್ಟಿರುವುದರಿಂದ ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇದೆ.ಇದರಿಂದ ಬೇಸತ್ತು ರಸ್ತೆಯ ಮಧ್ಯದಲ್ಲಿ ಕಳೆದ ಎರಡು ದಿನಗಳಿಂದ ಬಾಳೆಯ ಗಿಡಗಳನ್ನು ಅಲ್ಲಲ್ಲಿ ನೆಟ್ಟು. ಮತದಾನದ ಸಮಯದಲ್ಲಿ ಪೊಳ್ಳು ಭರವಸೆಯನ್ನು ನೀಡಿ,ಗೆದ್ದ ಮೇಲೆ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುವವರಿಗೆ ಎಚ್ಚರಗೊಳಿಸುವ ಉದ್ದೇಶದಿಂದ ರಸ್ತೆಯಲ್ಲಿ ಈ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ.ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ,ಮತದಾನದ ಸಮಯದಲ್ಲಿ ನೀಡಿದ ಭರವಸೆಯನ್ನು ಭರವಸೆಯಾಗಿ ಯೇ ಉಳಿಸದೆ.ತಮ್ಮ ಜವಾಬ್ದಾರಿಯನ್ನು ಅರಿತು, ಕೂಡಲೇ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಾಣ ಮಾಡಬೇಕಾಗಿ ಸಾರ್ವಜನಿಕ ಅಭಿಪ್ರಾಯ.

ಆರೋಗ್ಯ ಜಾಗೃತಿ ಜಾಥಾ ವೀಕ್ಷಿಸಿ, Subscribers ಮಾಡಿ

ಸೇತುವೆಯ ಇನ್ನೊಂದು ಬದಿಯು ಬೆಳ್ತಂಗಡಿ ತಾಲೂಕಿಗೆ ಸೇರಿದ್ದಾಗಿದ್ದು ಈ ರಸ್ತೆ ಡಾಮರೀಕರಣ ಗೊಂಡಿರುತ್ತದೆ.ಯಾಕೆ ಈ ತಾರತಮ್ಯ,ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

—ಜಾಹೀರಾತು—

Leave a Reply

error: Content is protected !!