
ನೇಸರ ಫೆ.19: ನೆಲ್ಯಾಡಿ- ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಶ್ರೀ ಶಿರಡಿ ಧೂಮಾವತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೇವಸ್ಥಾನದಲ್ಲಿ ಫೆ.19 ರಿಂದ ಫೆ.20ರ ವರೆಗೆ ನೇಮೋತ್ಸವ ಜರುಗಲಿರುವುದು.
ದಿನಾಂಕ 19-02-2022ನೇ ರವಿವಾರ ಬೆಳಗ್ಗೆ ಗಂಟೆ 7.00 ರಿಂದ ದೈವಗಳ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ, 9.00 ರಿಂದ ಮುಳಿಂಗಾರು ಚಾಮುಂಡೇಶ್ವರಿ ಸನ್ನಿಧಿ ಮತ್ತು ಕ್ಷೇತ್ರದ ನಾಗಸನ್ನಿಧಿಯಲ್ಲಿ ದೀಪಾರಾಧನೆ, 10.00ರಿಂದ ಕ್ಷೇತ್ರದ ದೈವಗಳಿಗೆ ದೀಪಾರಾಧನೆ, ಸಂಜೆ ಗಂಟೆ 4.30ಕ್ಕೆ ಪುತ್ಯೆ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾರಂಗಪೂಜೆ,ಸಂಜೆ ಗಂಟೆ 6.30ಕ್ಕೆ ದೈವಗಳ ಭಂಡಾರ ತೆಗೆಯುವುದು,ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ ನಂತರ ರಕ್ತೇಶ್ವರಿ,ಕಲ್ಲುರ್ಟಿ,ಪಂಜುರ್ಲಿ ದೈವಗಳ ನೇಮ.
ದಿನಾಂಕ 20-02-2022 ನೇ ರವಿವಾರ ಬೆಳಿಗ್ಗೆ ಗಂಟೆ 5.00ರಿಂದ ಶಿರಾಡಿ,ಧೂಮಾವತಿ ದೈವಗಳ ನೇಮ,ಬೆಳಗ್ಗೆ ಗಂಟೆ 7.00ಕ್ಕೆ ಹರಿಕೆ ಒಪ್ಪಿಸುವುದು ಹಾಗೂ ಬೂಳ್ಯ ವಿತರಣೆ ನಂತರ ಬಚ್ಚನಾಯಕ ಹಾಗೂ ಮಂತ್ರಗುಳಿಗ ನೇಮ ನಂತರ ಭಂಡಾರ ಚಾವಡಿಗೆ ಏರುವುದು, ಮಧ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ.
ಶ್ರೀಧರ ನೂಜಿನ್ನಾಯ ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ತಿಳಿಸಿದರು.


