ಕಣಿಯೂರು: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿ ಜುಲೈ ತಿಂಗಳ ಶ್ರಮದಾನವನ್ನು ನಡೆಸಲಾಯಿತು.
ಶ್ರಮದಾನದಲ್ಲಿ ಶಾಲಾ ಅಡಿಕೆ ತೋಟದಲ್ಲಿ ಕಳೆ ಗಿಡಗಳನ್ನು ಸ್ವಚ್ಚ ಗೊಳಿಸುವ ಮತ್ತು ಅಡಿಕೆ ಗಿಡಕ್ಕೆ ಗೊಬ್ಬರ ಮತ್ತು ಸೊಪ್ಪು ಹಾಕುವ ಕೆಲಸವನ್ನು ನಿರ್ವಹಿಸಲಾಯಿತು.
ಈ ಶ್ರಮದಾನ ದಲ್ಲಿ ಶಾಲೆಯ ಪೋಷಕರು ಮತ್ತು ವಿಪತ್ತು ಸ್ವಯಂ ಸೇವಕರಾದ ಉಮೇಶ್ ಗೌಡ, ಶ್ರೀಲತಾ, ವಿಮಲಾ ಬಂದಾರು, ಶರತ್, ರೋಹಿತ್ ಕಣಿಯೂರು, ವಿನಯಚಂದ್ರ, ಆನಂದ ಗೌಡ ಮೊಗ್ರು ಭಾಗವಹಿಸಿದರು. ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ, ವಲಯದ ಮೇಲ್ವಿಚಾರಕರಾದ ಶಿವಾನಂದ ರವರು ಪ್ರೇರಣೆ ನೀಡಿದರು.
ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲಾ ಮುಖ್ಯ್ಯೊಪಾಧ್ಯಾಯರಾದ ವಿಶ್ವನಾಥ್ ರವರು ಧನ್ಯವಾದ ಸಲ್ಲಿಸಿದರು.