ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣಗೌಡ ಅವರ ಅಧ್ಯಕ್ಷತೆಯಲ್ಲಿ ಜುಲೈ 14ರಂದು ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ತ್ರೈಮಾಸಿಕ ಸಭೆಯಲ್ಲಿ ಕಡಬ ಯೋಜನಾ ಕಚೇರಿಯ ಪ್ರಬಂಧಕ ಸುಜಾತ ಅವರು ಉಪಸ್ಥಿತರಿದ್ದು, ವಾರದ ಸಭೆಯನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಹಾಗೆಯೇ ವಾರದ ಹಣ ಸಂಗ್ರಹಣೆ ಮಾಡಲು ಹೋಗುವ ಸಂದರ್ಭದಲ್ಲಿ ಸದಸ್ಯರ ಬೆರಳಚ್ಚು ಇರುವುದು. ಹಾಗಾಗಿ ತಂಡದ ಸದಸ್ಯರೇ ಆದಷ್ಟು ಹೋಗುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಕೌಕ್ರಾಡಿ ಅನುಗ್ರಹ ತಂಡದ ಸದಸ್ಯ ಅಬ್ದುಲ್ ಜಬ್ಬಾರ್ ಅಪಘಾತದಲ್ಲಿ ಮರಣ ಹೊಂದಿದ್ದು ಅವರಿಗೆ ಸಂಪೂರ್ಣ ಸುರಕ್ಷಾ ಅಪಘಾತ ವಿಮೆ ರೂಪಾಯಿ 25000 ಮೊತ್ತದ ಚೆಕ್ಕನ್ನು ಪ್ರಬಂಧಕರಾದ ಸುಜಾತ ಅವರು ಅಬ್ದುಲ್ ಜಬ್ಬಾರ್ ಅವರ ಹೆಂಡತಿ ಹಾಜಿರಾ ಅವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ, ಸೇವಾಪ್ರತಿನಿದಿ ನಮಿತಾ.ಎಸ್ ಶೆಟ್ಟಿ, ನೆಲ್ಯಾಡಿ ವಲಯದ ಶೌರ್ಯ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು, ಒಕ್ಕೂಟದ ಪದಾಧಿಕಾರಿಗಳಾದ ಕೃಷ್ಣ.ಎಂ, ಹೇಮಲತಾ, ಹೇಮಾ.ವಿ, ಹೇಮಾವತಿ, ದಾಖಲಾತಿ ಸಮಿತಿ ಸದಸ್ಯರು, ಉಪಸಮಿತಿ ಸದಸ್ಯರು, ಎಲ್ಲ ತಂಡಗಳ ಪ್ರಬಂಧಕ ಸಂಯೋಜಕರು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಜವಾಬ್ದಾರಿಯನ್ನು ದುರ್ಗಾಪರಮೇಶ್ವರೀ ಮತ್ತು ಸುಮುಖ ತಂಡದವರು ವಹಿಸಿಕೊಂಡಿದ್ದರು. ದುರ್ಗಾಪರಮೇಶ್ವರೀ ತಂಡದ ಸದಸ್ಯ ಭಾರತಿ ಸ್ವಾಗತಿಸಿ, ಸುಮುಖ ತಂಡದ ದೇವಕಿ ವಂದಿಸಿದರು.