
ಕೊಕ್ಕಡ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ 23 ದೇವಸ್ಥಾನಗಳಿಗೆ ನೂತನ ವ್ಯವಸ್ಥಾಪನ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲಿ ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನ ಒಂದಾಗಿದೆ.
25 ವರ್ಷಕ್ಕಿಂತ ಮೇಲ್ಪಟ್ಟ ಆಸಕ್ತ ಭಕ್ತಾದಿಗಳು ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ದಿನಾಂಕ 03-08-24ರ ಒಳಗೆ “ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಮಿಂಟೋ ಶ್ರೀ ಆಂಜನೇಯ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018 ಇಲ್ಲಿಗೆ ನೇರವಾಗಿ ಸಲ್ಲಿಸತಕ್ಕದ್ದು.
ನಿಗದಿತ ಅರ್ಜಿ ನಮೂನೆಯು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ್ತು www.itms.kar.gov.in ನಲ್ಲಿ ಲಭ್ಯವಿರುತ್ತದೆ.







