ನೆಲ್ಯಾಡಿ: ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು ಅಂಗಣದೊಳಗೂ ನೀರು ಪ್ರವೇಶಿಸಿದೆ.
ಬುಧವಾರ ಮಧ್ಯಾಹ್ನದ ಬಳಿಕ ಈ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ದೇವಸ್ಥಾನದ ಸುತ್ತಲೂ ಹರಿದುಬಂದ ನೀರು ದೇವಸ್ಥಾನವನ್ನು ಆವರಿಸಿದೆ. ದೇವಸ್ಥಾನದ ಅಂಗಣದೊಳಗೂ ನೀರು ಪ್ರವೇಶಿಸಿದ್ದು ಸುಮಾರು 2 ಅಡಿಯಷ್ಟೂ ನೀರು ನಿಂತಿದೆ. ದೇವಸ್ಥಾನದ ಪಕ್ಕದಲ್ಲೇ ಹರಿಯುವ ತೋಡು ಸಹ ತುಂಬಿ ಹರಿಯುತ್ತಿದೆ. ಈ ಪರಿಸರದಲ್ಲಿನ ಗದ್ದೆ, ತೋಟಗಳಿಗೂ ನೀರು ನುಗ್ಗಿದೆ ಎಂದು ವರದಿಯಾಗಿದೆ.