ಶಿಬಾಜೆ: ಬೆಳ್ತಂಗಡಿಯ ಶಿಬಾಜೆ ಗ್ರಾಮದ ಬಂಡಿಹೊಳೆ ಪರಿಸರದಲ್ಲಿ ನವೀನ ದಾಮ್ಲೆ ಹಾಗೂ ಸಂಗಡಿಗರು ಪ್ರತಿ ವರ್ಷದಂತೆ ಈ ವರ್ಷ ಕೂಡ ಗಿಡ ನೆಡುವ ಕಾರ್ಯಕ್ರಮ ಜು.27ರಂದು ನಡೆಸಿದರು.
ಮಾವು, ಹಲಸು ಇತ್ಯಾದಿ ಗಿಡಗಳು ಹಾಗೂ ಸಮೀಪದ ನರ್ಸರಿಯಿಂದ ಖರೀದಿಸಿ ಸುಮಾರು 160 ಗಿಡಗಳನ್ನು ನೆಡಲಾಯಿತು.
ತಂಡದಲ್ಲಿ ಸ್ಥಳೀಯರಾದ ದಯಾನಂದ ಗೌಡ, ಪ್ರಾಣೇಶ ಖರೆ, ಸುದರ್ಶನ ದಾಮ್ಲೆ, ಕಾರ್ತಿಕ್ ದಾಮ್ಲೆ ಇದ್ದರು.