ನೆಲ್ಯಾಡಿ: ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದು ಹಲವಾರು ವಾಹನಗಳು ಕೆಸರಿನಲ್ಲಿ ಮುಚ್ಚಿ ಹೋಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮಣ್ಣು ತೆರವುಗೊಳಿಸಲಾಗಿದ್ದು ಏಕಮುಖ ವಾಹನ ಸಂಚಾರ ವಾಹನ ಸಂಚಾರ ಮತ್ತೆ ಶುರು ಮಾಡಲಾಗಿದೆ.
ನೆನ್ನೆಯಿಂದ ದಾರಿ ಮಧ್ಯೆ ಸಿಲುಕಿದ್ದ ವಾಹನಗಳನ್ನ ತೆಗೆಯುತ್ತಾ ಮಣ್ಣು ತೆರವು ಕಾರ್ಯಚರಣೆಯನ್ನು ಆರಂಭಿಸಿದ್ದ ಅಧಿಕಾರಿಗಳು ಕೆಸರಿನಲ್ಲಿ ಸಿಲುಕಿದ ಟ್ರಕ್ ಅನ್ನು ಹೊರತೆಗೆದಿದ್ದಾರೆ.
ಆ ಪ್ರದೇಶದಲ್ಲಿ ಮಳೆ ಬರುತ್ತಿದ್ದು ಒಂದು ಬದಿಯಿಂದ ಮಣ್ಣು ಕುಸಿಯುತ್ತಲೇ ಇದೆ. ಯಾವ ಕ್ಷಣದಲ್ಲಿ ಏನಾಗುವುದೇ ಎಂಬ ಭಯದಲ್ಲಿ ವಾಹನ ಸವಾರರ ಸಂಚರಿಸುತ್ತಿದ್ದಾರೆ.
ಭಾರೀ ಪ್ರಮಾಣದ ಮಣ್ಣು ಕುಸಿದು ಕೆಸರು ಮಯವಾದ ಶಿರಾಡಿಘಾಟ್ ರಸ್ತೆಯಲ್ಲಿ ಸದ್ಯ ಈಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದಾಗ್ಯೂ ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಸರು ನಿಂತಿದ್ದು ಕೆಸರಿನ ನಡುವೆಯೇ ವಾಹನಗಳು ಸಂಚಾರ ಮಾಡುತ್ತಿವೆ. ರಸ್ತೆಗೆ ಬಿದ್ದಿದ್ದ ಮಣ್ಣು ತೆರವು ಬಳಿಕ ಕೆಸರಿನಿಂದಾಗಿ ನಿಧಾನವಾಗಿ ವಾಹನಗಳು ಸಂಚಾರಿಸುತ್ತಿವೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಮತ್ತೆ ಭೂಕುಸಿತ ಸಂಭವಿಸಿರುವುದಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ ಎನ್ನಲಾಗಿದೆ. ಈ ರಸ್ತೆಯನ್ನು ಕೂಡಲೇ ಬಂದ್ ಮಾಡದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತವಾದರೆ ಅದಕ್ಕೆ ಸರ್ಕಾರ ನೆರೆಹೊಣೆಯಾಗಬೇಕಾಗುತ್ತದೆ.
ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿ ಘಾಟ್ ಪ್ರಮುಖ ರಸ್ತೆಯಾಗಿದೆ. ಉಳಿದಂತೆ ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ಘಾಟಿಯಿಂದಲೂ ಬೆಂಗಳೂರಿಗೆ ಸಂಪರ್ಕ ಬೆಳೆಸಬಹುದಾಗಿದೆ. ಆದರೆ, ಈ ರಸ್ತೆಗಳು ಅಗಲ ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳ ಓಡಾಟಕ್ಕೆ ಅನುಕೂಲವಾಗಿಲ್ಲ.ಶಿರಾಡಿ ರಸ್ತೆಯ ಬದಲಿಗೆ ಈ ರಸ್ತೆಗಳನ್ನು ಸಂಚಾರಕ್ಕೆ ಬಳಸಿದರೆ ಘಾಟಿಯಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಶಿರಡಿಘಾಟ್ನಲ್ಲಿ ಈ ವರ್ಷದಲ್ಲಿ ನಾಲ್ಕನೇ ಬಾರಿ ಗುಡ್ಡ ಕುಸಿತವಾಗಿದೆ. ಇದು ಪ್ರಕೃತಿ ವಿಕೋಪವಲ್ಲ, ಗುತ್ತಿಗೆದಾರನ ಮಹಾಲೋಪ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ. ಇದರಿಂದ ಹಲವಾರು ವಾಹನಗಳು ಸಿಲುಕಿಕೊಂಡಿದ್ದವು. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಒಟ್ಟಿನಲ್ಲಿ ಸರ್ಕಾರ ಟೆಂಡರ್ ಕೊಡುವ ಮುನ್ನ ಇಂತಹ ವಿಚಾರಗಳ ಬಗ್ಗೆ ಗಮನಕೊಡುವುದು ಮುಖ್ಯವಾಗಿದೆ.