ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿನಲ್ಲಿ ಆಗಸ್ಟ್ 1 ರಂದು ಮಧ್ಯಾಹ್ನ 12:30 ಗಂಟೆಗೆ ನಂದಾದೀಪ ಸೇವೆಯ ಚಾಲನೆ ನಡೆಯಲಿದೆ.
ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ದೀಪ ಬೆಳಗಿಸುವ ಮೂಲಕ ಈ ಸೇವೆಯನ್ನು ಉದ್ಘಾಟಿಸಲಾಗುವುದು.
ಅನಂತರ, ದೇವಾಲಯ ಸೇವಾ ಒಕ್ಕೂಟದ ಅಧಿಕೃತ ಚಾಲನೆ ನಡೆಯಲಿದ್ದು, ಇದನ್ನು ರಮೇಶ್ ಕೆ. ಕೊರಮರು ದೀಪ ಬೆಳಗಿಸುವ ಮೂಲಕ ಆರಂಭಿಸಲಿದ್ದಾರೆ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತವೃಂದದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನೆರವೇರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆಯವರು ತಿಳಿಸಿದ್ದಾರೆ.
ಪ್ರತಿ ವ್ಯಕ್ತಿಯಿಂದ – ವಿಶೇಷ ಸಂದರ್ಭಗಳಲ್ಲಿ ನಂದಾದೀಪ ಸೇವೆ
ನಂದಾದೀಪ ಸೇವೆಯನ್ನು ಪ್ರತಿಯೊಬ್ಬರೂ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಅಥವಾ ಹುಟ್ಟಿದ ದಿನ, ಮದುವೆ ದಿನ, ಪಟ್ಟಾಭಿಷೇಕ ದಿನ, ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಮಾಡಬಹುದು. ಇದು ನಮ್ಮ ಜೀವನದ ವಿಶೇಷ ಕ್ಷಣಗಳನ್ನು ದೇವರ ಸಾನಿಧ್ಯದಲ್ಲಿ ಆಚರಿಸುವ ಪರಿಪೂರ್ಣ ವಿಧಾನ.
ಸಂಕಲ್ಪ ಅಥವಾ ಪ್ರಾರ್ಥನೆಯಿಂದ ಪ್ರಾರಂಭ – ಭಕ್ತನಿಗೆ ಪ್ರಸಾದ
ನಂದಾದೀಪ ಸೇವೆಯನ್ನು ಸಂಕಲ್ಪ ಅಥವಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ಸೇವೆಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಇದು ಭಕ್ತನಿಗೆ ಆಧ್ಯಾತ್ಮಿಕ ಶಾಂತಿ ಮತ್ತು ತೃಪ್ತಿಯನ್ನು ನೀಡುತ್ತದೆ.