ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ -ಬೀಡು ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಶೇರ್ ಮಾಡಿ

ಇಚ್ಲಂಪಾಡಿ -ಬೀಡು “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ”ದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು 10 -01 -2024 ನೇ ಬುಧವಾರದಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ವೈದಿಕ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು .

ಆಸ್ತಿಕ ಬಂಧುಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ.

ಕಾರ್ಯಕ್ರಮಗಳು

09 -01 -2024 ನೇ ಮಂಗಳವಾರ

ಬೆಳಿಗ್ಗೆ ಗಂಟೆ 10 -00 ಕ್ಕೆ : ಊರ ಭಕ್ತಾದಿಗಳಿಂದ
ಹಸಿರು ಹೊರೆ ಕಾಣಿಕೆ ಸಮರ್ಪಣೆ

10 -01 -2024 ನೇ ಬುಧವಾರ

ಬೆಳಿಗ್ಗೆ ಗಂಟೆ 09-00 ಕ್ಕೆ :ದೇವತಾ ಪ್ರಾರ್ಥನೆ ,ಸ್ವಸ್ತಿ ಪುಣ್ಯಾಹ ವಾಚನ ,ಮಹಾಗಣಪತಿ ಹೋಮ ,ಕಲಶ ಪ್ರತಿಷ್ಠೆ ,ನಾಗತಂಬಿಲ

11-30 ಕ್ಕೆ :ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಕಲಶಾಭಿಷೇಕ

ಮಧ್ಯಾಹ್ನ12-30 ಕ್ಕೆ :ಮಹಾಪೂಜೆ ,ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ

ವಿಶೇಷ ಸೂಚನೆ

ವಾರ್ಷಿಕ ಮಹೋತ್ಸವದ ಪ್ರಯುಕ್ತ ಊರ ಭಕ್ತಾದಿಗಳು ತಮ್ಮ ಈ ದೇವಸ್ಥಾನಕ್ಕೆ ದಿನಾಂಕ 09 -01 -2024 ನೇ ಮಂಗಳವಾರ ಬೆಳಿಗ್ಗೆ 9 .00 ಗಂಟೆಗೆ ನಿಮ್ಮ ಮನೆ ಬಳಿ ಬರುವ ವಾಹನದಲ್ಲಿ ಹಸಿರು ಹೊರೆ ಕಾಣಿಕೆ ಸಮರ್ಪಿಸುವಂತೆ ವಿನಂತಿಸಲಾಗಿದೆ .
ವಾರ್ಷಿಕ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳು ಸ್ವ-ಇಚ್ಛೆಯಿಂದ ನೀಡುವ ತನು-ಮನ-ಧನ ಸಹಾಯವನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಲಾಗುವುದು.

    Leave a Reply

    error: Content is protected !!