ನೆಲ್ಯಾಡಿ : ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಆ.1 ಮಧ್ಯಾಹ್ನದ ವೇಳೆ ಪುನರಾರಂಭಗೊಂಡಿದೆ.
ಕಳೆದ ರಾತ್ರಿ ಶಿರಾಡಿ ಘಾಟ್ ನ ದೊಡ್ಡತಪ್ಲು ಬಳಿ ಗುಡ್ಡ ಜರಿದು ವಾಹನಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಸ್ಥಗಿತ ಗೊಂಡಿತ್ತು. ಇದೀಗ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಲಾಗಿದೆ. ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡಿದ್ದ 2 ಕಂಟೈನರ್ ಹಾಗೂ 1 ಡಾಮರು ಸಾಗಾಟದ ಟ್ಯಾಂಕರ್ ತೆರವು ಗೊಳಿಸಲಾಗಿದ್ದು ಮಧ್ಯಾಹ್ನದ ಬಳಿಕ ಸಂಚಾರ ಪುನರಾರಂಭ ಗೊಂಡಿದೆ.
ಆದರೂ ಮಣ್ಣು ಕುಸಿಯುತ್ತಲೇ ಇದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡಬೇಕಾಗಿದೆ.