ನೇಸರ ಫೆ.21: ಸಾಮಾಜಿಕ ಸಂದೇಶವನ್ನು ಒಳಗೊಂಡ “ಮುದೆಲ್” ತುಳು ಕಿರುಚಿತ್ರದ ಟೇಲರ್ “ಕೂಲ್ ಕುಸಲ್ ಕ್ರಿಯೇಷನ್ ನೆಲ್ಯಾಡಿ” ಯ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಮಾರ್ಚ್ 5ರಂದು ತೆರೆಕಾಣಲಿರುವ ಕಿರುಚಿತ್ರದ ಕಥೆಯ ಟ್ರೈಲರ್ ಕುತೂಹಲ ಸೃಷ್ಟಿಸಿದೆ.
ಸಂಭಾಷಣೆಯನ್ನು ರಮಾ ಬಿಸಿ ರೋಡ್ ಬರೆದಿದ್ದಾರೆ,ರಂಗಭೂಮಿ ಹಾಸ್ಯ ಕಲಾವಿದ ರವಿ ರಾಮಕುಂಜ ನಿರ್ದೇಶಿಸಿದ್ದು,ಚಿತ್ರೀಕರಣ ಹಾಗೂ ಎಡಿಟಿಂಗ್ ಸಂಚಾರಿ ಸ್ಟುಡಿಯೋದ ಸಂತೋಷ್ ಕುಮಾರ್ ಶೆಟ್ಟಿ ಮಾಡಿದ್ದಾರೆ,ಮುರಳಿ.ಎಸ್ ಹಿನ್ನಲೆ ಸಂಗೀತ ನೀಡಿದ್ದು,ಕಥೆ ಮತ್ತು ಚಿತ್ರಕಥೆ ಅನಿಲ್.ರೈ ನೆಲ್ಯಾಡಿ ಹಾಗೂ ಕುಶಾಲಪ್ಪ ನೆಲ್ಯಾಡಿಯವರಿಂದ ಮೂಡಿಬಂದಿದೆ. ಪೋಸ್ಟರ್ ಡಿಸೈನ್ ರಾಜೇಶ್ ಕೋಲ್ಪೆ ಹಾಗೂ ಮಹೇಶ್ ಕುಲಾಲ್ ಮಾಡಿದ್ದು, ಹೇಮಂತ್ ಆಚಾರ್ಯ ಟೈಟಲ್ ಕಾರ್ಡ್ ಡಿಸೈನ್ ಮಾಡಿದ್ದಾರೆ.
ಮುಖ್ಯಭೂಮಿಕೆಯಲ್ಲಿ ರವಿ ರಾಮಕುಂಜ,ಸಂತೋಷ್ ನೆಲ್ಯಾಡಿ,ಅನಿಲ್ ನೆಲ್ಯಾಡಿ, ಕುಶಾಲಪ್ಪ ನೆಲ್ಯಾಡಿ ಕಾಣಿಸಿಕೊಂಡಿದ್ದಾರೆ.
ತಾರಾನಾಥ್ ಸಾಲಿಯಾನ್ ಪೂಸೊಲಿಗೆ,ಉದಯ ಆಚಾರ್ಯ ಪುತ್ತಿಲ,ಪೂರ್ಣೇಶ್ ಕುಲಾಲ್ ಎರ್ಮಾಳ,ಪುರುಷೋತ್ತಮ್ ಶೆಟ್ಟಿ ಕೊಲ್ಯೊಟ್ಟು,ಗಣೇಶ್ ನೆಕ್ರಾಜೆ,ಗುಣಕರ್,ಸುರೇಶ್ ಪಡಿಪಂಡ,ಚರಣ್ ಕಡಬ,ಕಿರಣ್,ಜೀವಿತಾ ಮಾದೇರಿ,ತಾರನಾಥ, ಚರಣ್ ರೈ,ಸುಭಾಷ್ ಜನನಿ ಶಾಮಿಯಾನ, ಧನಂಜಯ ಗೌಡ ಹೊಸವೊಕ್ಲು,ನಿತೇಶ್ ಪುಳಿತ್ತಡಿ,ನವೀನ್ ಬೆಂಗಳೂರು,ಯಶವಂತ್ ಇಚಿಲಂಪಾಡಿ,ಲಕ್ಷ್ಮಣ್ ಕಲ್ಲೇರಿ,ಸುರೇಶ್ ಬಜಾರು,ಸೋನಿತ್ ಹೊಸಮಜಲು,ನವೀನ್ ಡಿಸೋಜ,ಮೋಹನ್ ಇಳಂತಿಲ,ನವೀನ್ ಉಪ್ಪಿನಂಗಡಿ,ಶ್ರೀಮತಿ ಹೇಮಲತಾ ರತ್ನಾಕರ ಶೆಟ್ಟಿ ಕೊಲ್ಯೊಟ್ಟು,ಜ್ಯೋತಿ ವಂದನ್ ನಿರ್ಮಾಣದಲ್ಲಿ ಈ ಕಿರುಚಿತ್ರ ಮೂಡಿಬರಲಿದೆ
—ಜಾಹೀರಾತು—