
ನೇಸರ ಫೆ.21: ಅರಿಕೇಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಪ್ರಾರಂಭದಿಂದಲೂ ವಿಶೇಷವಾಗಿ ಮಾರ್ಗದರ್ಶನ ನೀಡುತ್ತಾ ಹರಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಧರ್ಮಸ್ಥಳದ ಧರ್ಮಧಿಕಾರಿಗಳಾದ ಗೌರವಾನ್ವಿತ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ರೂಪದಲ್ಲಿ 10 ಲಕ್ಷ ರೂಪಾಯಿ ಅನುದಾನವನ್ನು ನೀಡಿ ಅನುಗ್ರಹಿಸಿದ್ದಾರೆ.
ಸಪ್ತಋಷಿಗಳು ತಪಸ್ಸುಗೈದ ಹಸಿರುಗುಡ್ಡದ ಮೇಲಿರುವ ಈ ದೇಗುಲದ ಮಹಿಮೆಯನ್ನು ಈ ಹಿಂದೆಯೂ ಅವರ ಭೇಟಿಯ ಸಂದರ್ಭದಲ್ಲಿ ಕೇಳಿ ತಿಳಿದುಕೊಂಡ ಪೂಜ್ಯರು ನವೀಕರಣ ಕೆಲಸಗಳು ಸಾಂಗವಾಗಿ ನಡೆಯುವಂತೆ ಆಶೀರ್ವದಿಸಿರುತ್ತಾರೆ. ಪೂಜ್ಯರು ನೀಡಿರುವ ಈ ಮೊತ್ತ ಅಕ್ಷಯವಾಗಲಿ. ವನದುರ್ಗಾ ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಮಂಜುನಾಥ ಸ್ವಾಮಿ ಮತ್ತು ವನದುರ್ಗೆಯು ಭಕ್ತರಿಗೆ ಇನ್ನಷ್ಟು ಶಕ್ತಿ, ಪ್ರೇರಣೆ ನೀಡಲಿ. ವನದುರ್ಗೆ ನೆಲೆಯಾದ ನಮ್ಮೂರಿನಲ್ಲಿ ಸಮೃದ್ಧಿ, ಸುಭಿಕ್ಷೆ ನೆಲೆಯಾಗಲಿ ಎಲ್ಲರಿಗೂ ಶ್ರೀ ವನದುರ್ಗೆ ಮಂಗಳವನ್ನು ಉಂಟುಮಾಡಲಿ ಎಂದು ವೃಷಾಂಕ್ ಖಾಡಿಲ್ಕರ್,ಉಪಾಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ,ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಆಡಳಿತ ಸಮಿತಿ ಕೋಶಾಧಿಕಾರಿ ಮುರಳೀಧರ ಪಾಲೆಂಜ, ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಸುಧೀರ್ ಕುಮಾರ್ ಎಂ. ಎಸ್.,ಜಯಪ್ರಸಾದ್ ಶೆಟ್ಟಿಗಾರ್, ಶೀನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
—ಜಾಹೀರಾತು—




