ಇಚಿಲಂಪಾಡಿ: ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರಿಂದ ಶ್ರಮದಾನ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಅ.7 ರಂದು ಇಚಿಲಂಪಾಡಿ ನೇರ್ಲ ಶಾಲೆಯಲ್ಲಿ ಶ್ರಮದಾನ ನಡೆಯಿತು.

ಶಾಲೆಯ ಸುತ್ತ ಮುತ್ತ ಸ್ವಚ್ಛತೆ ಹಾಗೆಯೇ ಶಾಲೆಯ ಮೇಲ್ಛಾವಣಿ ಮೇಲೆ ಬಗ್ಗಿದ ಮರದ ಕೊಂಬೆಗಳನ್ನು ಕಡಿಯಲಾಯಿತು. ಶ್ರಮದಾನದಲ್ಲಿ 16 ಸ್ವಯಂ ಸೇವಕರು ಭಾಗವಹಿಸಿದ್ದರು. ಶ್ರಮದಾನದ ಬಳಿಕ ಮಾಸಿಕ ಸಭೆಯನ್ನು ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಇವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ಮೇಲ್ವಿಚಾರಕರು ಮಾತನಾಡಿ ಎಲ್ಲರು ಒಗ್ಗಟ್ಟಿನಲ್ಲಿ ಕೆಲಸ ಮಾಡಿ. ಶ್ರಮದಾನ ಮಾಡುವ ಒಂದು ವಾರದ ಒಳಗಡೆ ತಿಳಿಸುವಂತೆ ಹೇಳಿದರು. ಅಧ್ಯಕ್ಷತೆ ವಹಿಸಿದ ರಮೇಶ್ ಬಾಣಜಾಲುರವರು ಘಟಕಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಘಟಕದ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಇಚಿಲಂಪಾಡಿ ನೇರ್ಲ ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ನಂದಕುಮಾರಿ, ಸದಸ್ಯರು ಹಾಗೆಯೇ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.

ಘಟಕ ಸಂಯೋಜಕಿ ನಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಇಚಿಲಂಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೇದಾ.ಪಿ ವಂದಿಸಿದರು.

Leave a Reply

error: Content is protected !!