ಕೊಕ್ಕಡ: ಮುಂಡೂರುಪಲ್ಕೆ-ಮೈಪಾಲ-ಬಂದಾರು ಸಂಪರ್ಕಿಸುವ ರಸ್ತೆ ಶೀಘ್ರ ಸರಿಪಡಿಸುವಂತೆ ಗ್ರಾಮಸ್ಥರಿಂದ ಮನವಿ

ಶೇರ್ ಮಾಡಿ

ಕೊಕ್ಕಡ ಗ್ರಾಮದ ಮುಂಡೂರ್ ಪಲ್ಕೆ -ಮೈಪಾಲ ರಸ್ತೆಯು ತೀರ ಹದಗೆಟ್ಟಿದ್ದು ನಡೆದಾಡಲು, ವಾಹನ ಸಂಚರಿಸಲು ಆಗದ ರೀತಿಯಲ್ಲಿ ಕೆಸರಿನಿಂದ ಕೂಡಿದೆ.

ಶಾಲೆ ಅಂಗನವಾಡಿ ಕೇಂದ್ರ ನೂರಾರು ಮನೆಗಳು, ಎoಡೋ ಸಂತ್ರಸ್ತರು ಮತ್ತು ಈ ಭಾಗಕ್ಕೆ ಸಂಚಾರಿ ರೇಷನ್ ವ್ಯವಸ್ಥೆ ಇದ್ದು ಎಲ್ಲರು ಈ ರಸ್ತೆಯ ಅವ್ಯವಸ್ಥೆಯಿಂದ ಪರಿ ತಪಿಸುವಂತಾಗಿದೆ. ಎಸ್ ಸಿ,ಎಸ್ ಟಿ ಕಾಲೋನಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ರಸ್ತೆಯಾಗಿದ್ದು. ಗ್ರಾಮ ಪಂಚಾಯಿತಿ ನಿದ ಅಲ್ಪ ಮಟ್ಟದ ದುರಸ್ತಿ ಮಾಡಿದ್ದರು. ಸುರಿಯುತ್ತಿರುವ ಭಾರಿ ಮಳೆಯಿಂದ ಮತ್ತೆ ಹಿಂದಿನ ಸಹಜ ಸ್ಥಿತಿಗೆ ಮರಳಿದೆ ಹೆಚ್ಚಿನ ದುರಸ್ತಿಗೆ ಪಂಚಾಯಿತಿ ಬಳಿ ಹಣದ ಕೊರತೆ.

ಶಾಸಕರ ಅನುದಾನದಿಂದ ಅಲ್ಲಲ್ಲಿ ಕಾಂಕ್ರೀಟ್
ಶಾಸಕರ ಅನುದಾನದಿಂದ ತೀರಾ ಸಮಸ್ಯೆ ಎನಿಸಿದ ಜಾಗಕ್ಕೆ ಒಟ್ಟು 50ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದರು ಬಾಕಿ ಇರುವ ಕಡೆ ಆಗದೇ ಇರುವುದೇ ಸಮಸ್ಯೆ

ತಹಸೀಲ್ದಾರ್ ಗೆ ಗ್ರಾಮಸ್ಥರಿಂದ ಮನವಿ
ತಹಸೀಲ್ದಾರ್ ಗೆ ಊರಿನವರು ಸೇರಿ ಮನವಿ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸರಿಮಾಡಿ ಕೊಡುವ ಭರವಸೆ ನೀಡಿದ್ದು ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

Leave a Reply

error: Content is protected !!