ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಸದ್ಭಾವನಾ ದಿನಾಚರಣೆ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಸದ್ಭಾವನಾ ದಿನಾಚರಣೆಯು ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಇವರ ಉಪಸ್ಥಿತಿಯಲ್ಲಿ ನಡೆಯಿತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು, “ನಾವೆಲ್ಲರೂ ಜಾತಿ, ಮತ, ಧರ್ಮ ಹಾಗು ಭಾಷೆಗಳ ವ್ಯತ್ಯಾಸಗಳನ್ನು ದೊಡ್ಡದು ಮಾಡದೆ, ಸೌಹಾರ್ದತೆಯಿಂದ ಬಾಳುತ್ತಾ, ರಾಷ್ಟ್ರ ಹಿತದ ಏಕಭಾವವನ್ನು ಹೊಂದಬೇಕು. ಯಾವುದೇ ಕಾರಣಕ್ಕೂ ಹಿಂಸೆಯ ಮಾರ್ಗವನ್ನು ಅನುಸರಿಸದೇ, ಶಾಂತಿಯ ಮಾರ್ಗವನ್ನು ಪಾಲಿಸಬೇಕು” ಎಂದು ಕರೆಕೊಟ್ಟರು.

ಪ್ರಾಂಶುಪಾಲರಾದ ಚಂದ್ರಶೇಖರ್.ಕೆ ಅವರು ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನ ಬೋಧಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಮತ್ತು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಇದರ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯ್ಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ಅಧ್ಯಕ್ಷರಾದ ಮಹೇಶ್.ಕೆ ಸವಣೂರು, ಮುಖ್ಯ ಶಿಕ್ಷಕರಾದ ಸತೀಶ್ ಭಟ್, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀನಾರಾಯಣ ರಾವ್ ಆತೂರು ಮತ್ತು ಇತರರು ಉಪಸ್ಥಿತಿದ್ದರು.

Leave a Reply

error: Content is protected !!