ಶಿಬರಾಜೆ: 23ನೇ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ಶೇರ್ ಮಾಡಿ

ಶಿಬರಾಜೆ: ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಇವರ ಸಹಕಾರದೊಂದಿಗೆ 23ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಸೆ.1ರಂದು ಜರುಗಿತು.

ಆಟೋಟ ಸ್ಪರ್ಧೆಗಳನ್ನು ಊರಿನ ಹಿರಿಯ ವ್ಯಾಪಾರಸ್ಥ ಸಂಜೀವ ನಾಯ್ಕ್ ಅವರು ಉದ್ಘಾಟಿಸಿದರು. ಊರ ಪರವೂರ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಆಚರಣೆ ಸಮಿತಿಯ ಅಧ್ಯಕ್ಷ ಪಿ.ಟಿ ಸಬಾಸ್ಟಿನ್ ಅವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಳೆಂಜ ಅರಣ್ಯ ವ್ಯಾಪ್ತಿಯಲ್ಲಿ 8ವರ್ಷಗಳ ಕಾಲ ದಕ್ಷ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರಿನ ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆ ಗೊಂಡಿರುವ ಪ್ರಶಾಂತ್ ಅವರನ್ನು ಮತ್ತು ಎಸ್ ಡಿ ಎಂ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಯುವರಾಜ್ ಪೂವಣಿ ಅವರನ್ನು ಸನ್ಮಾನಿಸಲಾಯಿತು.

ಎಸ್ ಕೆ ಡಿ ಆರ್ ಡಿ ಪಿ ನಿರ್ದೇಶಕ ವಸಂತ.ಬಿ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಳೆಂಜ ಗ್ರಾಮ ಪಂಚಾಯಿತಿ ಸದಸ್ಯರಾದ ನಿತ್ಯಾನಂದ ರೈ ಮತ್ತು ಪ್ರೇಮ ಬಿ ಎಸ್ ಉಪಸ್ಥಿತರಿದ್ದರು.

ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಕಾರ್ಯದರ್ಶಿ ರಾಜೇಶ್.ಶೆಟ್ಟಿ, ಕೋಶಧಿಕಾರಿ ವಿದ್ಯೇoದ್ರ ಗೌಡ, ಜೆಸಿಐ ಅಧ್ಯಕ್ಷ ಸಂತೋಷ್ ಜೈನ್ ವಲಂಬಳ, ಕಾರ್ಯದರ್ಶಿ ಅಕ್ಷತ್ ರೈ, ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ, ಕಳೆoಜ ಸದಾಶಿವೇಶ್ವರ ದೇವಳದ ಅಧ್ಯಕ್ಷ ಶ್ರೀಧರ್ ರಾವ್, ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಗೌಡ ಕುಕ್ಕಾಜೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Leave a Reply

error: Content is protected !!