ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರಿಗೆ 15% ಡಿವಿಡೆಂಟ್

ಶೇರ್ ಮಾಡಿ

ನೆಲ್ಯಾಡಿ: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶುಕ್ರವಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷೆ ಆಶಾ ಎಸ್.ಜೋಗಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ 240 ಸದಸ್ಯೆಯರಿದ್ದು, 200 ಸದಸ್ಯೆಯರು ಸಂಘಕ್ಕೆ ಹಾಲು ಪೂರೈಸುತಿದ್ದಾರೆ. ಹಾಲು ವ್ಯಾಪಾರ, ಪಶು ಹಾರ ಮತ್ತು ಇತರ ಆದಾಯ ಒಟ್ಟು ಸೇರಿ 14,01,501.33 ರೂ.ಲಾಭ ಬಂದಿರುತ್ತದೆ. ಆಡಳಿತ ವೆಚ್ಚ ಮತ್ತು ಎಲ್ಲಾ ಸವಕಳಿಗಳನ್ನುಕಳೆದು ರೂ.5,27,523.08 ನಿವ್ವಳ ಲಾಭ ಗಳಿಸಿದೆ ಎಂದು ಕಾರ್ಯದರ್ಶಿ ಕಮಲ ವಾರ್ಷಿಕ ವರದಿಯಲ್ಲಿ ತಿಳಿಸಿದರು.

ಅಧ್ಯಕ್ಷೆ ಆಶಾ.ಎಸ್ ಜೋಗಿತ್ತಾಯ ಅವರು ನಿವ್ವಳ ಲಾಭದಲ್ಲಿ ಪ್ರತಿ ಲೀ.ಹಾಲಿಗೆ ರೂ.0.60 ಪೈಸೆ ಬೋನಸ್ ಹಾಗೂ 15% ಡಿವಿಡೆಂಟ್ ನೀಡುವುದಾಗಿ ತಿಳಿಸಿದರು.
2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

ಸಂಘದ ಸದಸ್ಯರಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ಲೈನಾ ಅಲೆಕ್ಸ್ ಮತ್ತು 25 ಸದಸ್ಯೆಯರನ್ನು ವಿಶೇಷವಾಗಿ ಗುರುತಿಸಿ ಹಾಲು ಪೂರೈಸಿದ ಎಲ್ಲಾ ಸದಸ್ಯೆಯರಿಗೂ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸಂಘದ ಹಿರಿಯ ನಿರ್ದೇಶಕಿ ಹೇಮಾವತಿ.ರೈ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ದ.ಕ.ಹಾಲು ಒಕ್ಕೂಟ ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕ ಡಾ.ಸತೀಶ್ ಅವರು ಪಶು ಆಹಾರದ ಜೊತೆಗೆ ಹಸಿರು ಹುಲ್ಲು, ಜೋಳದ ದಂಟು, ಸೈಲೇಜ್ ಮುಂತಾದವುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿಯಲ್ಲಿ ಹೆಚ್ಚು ಹಾಲುಗಳಿಸಬಹುದೆಂದು ಮಾಹಿತಿ ನೀಡಿದರು.

ಸಂಘದ ವಿಸ್ತರಣಾಧಿಕಾರಿ ಆದಿತ್ಯ ಅವರು ಒಕ್ಕೂಟದಿಂದ ದೊರೆಯುವ ಅನುದಾನಗಳ ಬಗ್ಗೆ ಸವಿವರವಾಗಿ ತಿಳಿಸಿದರು.

ಉಪಾಧ್ಯಕ್ಷೆ ಅನಸೂಯ.ಜಿ ಸ್ವಾಗತಿಸಿದರು. ನಿರ್ದೇಶಕಿ ಗಾಯತ್ರಿ.ಜಿ ಪ್ರಾರ್ಥಿಸಿದರು. ನಿರ್ದೇಶಕಿ ಹೇಮಾವತಿ.ಜೆ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಗೀತಾ, ರಂಜಿತಾ ಹಾಗೂ ಮನೋಜ್ ಕುಮಾರ್.ಎನ್ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Leave a Reply

error: Content is protected !!