ಆಲಂತಾಯ ಶಾಲಾ ಶೌಚಾಲಯ ಕೊಠಡಿ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ: ಉದ್ಯೋಗ ಖಾತರಿ ಯೋಜನೆಯಡಿ ಆಲಂತಾಯ ಸರಕಾರಿ ಶಾಲೆಯಲ್ಲಿ ನಿರ್ಮಿಸಲಾದ ಶೌಚಾಲಯ ಕೊಠಡಿ ಉದ್ಘಾಟನೆ ಸೆ.18ರಂದು ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಜನಾರ್ದನ ಪಟೇರಿ, ಶಿವಪ್ರಸಾದ್ ಶಿವಾರು, ಪದ್ಮನಾಭ ಪೂಜಾರಿ ಪೆರ್ನಾರ್, ಮಾಜಿ ಸದಸ್ಯ ನೀಲಪ್ಪ ನಾಯ್ಕ ಅಲಂಗಪ್ಪೆ, ಕಾರ್ಯದರ್ಶಿ ಚಂದ್ರಾವತಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ನರೇಗಾ ಯೋಜನೆಯ ಇಂಜಿನಿಯರ್ ಮನೋಜ್, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್, ಕೊಯಿಲ ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ರಾಮಚಂದ್ರ ಏಣಿತ್ತಡ್ಕ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಎಪಿಎಂಸಿ ಮಾಜಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಬೂತ್ ಸಮಿತಿ ಅಧ್ಯಕ್ಷ ಧರ್ನಪ್ಪ ಗೌಡ, ಪ್ರಮುಖರಾದ ಬಾಲಕೃಷ್ಣ ಅಲಂಗಪ್ಪೆ, ಸುಪ್ರೀತ್ ಪುಲಾರ, ಎಸ್‌ಡಿಎಂಸಿ ಸದಸ್ಯರಾದ ಈಶ್ವರ ಭಟ್, ಯಾದವ್ ನಾಯ್ಕ್ ಶಿವಾರು, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಪಾಲೇರಿ, ಗುತ್ತಿಗೆದಾರ ಉಮ್ಮರ್ ಬೈಲಂಗಡಿ, ಸಹಶಿಕ್ಷಕರು, ಊರಿನ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ಲವ್ಲಿ ಜೋಸ್ ಸ್ವಾಗತಿಸಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ.ವಂದಿಸಿದರು.

Leave a Reply

error: Content is protected !!