ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್‌ ಮಿಲಾದ್‌ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನ ಅಂಗವಾಗಿ ಈದ್‌ ಮಿಲಾದ್‌(ಮಿಲಾದುನ್ನಬಿ) ಯನ್ನು ಸಂಭ್ರಮ, ಸಡಗರದಿಂದ ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸೋಮವಾರ ಆಚರಿಸಲಾಯಿತು.

ರವಿವಾರ ರಾತ್ರಿ ಮಸೀದಿಗಳಲ್ಲಿ ಮೌಲೂದ್‌ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಸೋಮವಾರ ಬೆಳಗ್ಗೆ ಆಡಳಿತ ಕಮಿಟಿಯ ಉಸ್ತುವಾರಿ ಅಧ್ಯಕ್ಷ ಎನ್.ಎಸ್ ಸುಲೇಮಾನ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಮಸೀದಿಯ ಖತೀಬಾ ಶ್ವಕತ್ ಅಲಿ ಅಮಾಮಿ ಅವರು ದುಹ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆಡಳಿತ ಕಮಿಟಿಯ ಅಧ್ಯಕ್ಷ ಮಹಮದ್ ಹನೀಫ್ ಸಿಟಿ ಅವರು ಪ್ರವಾದಿ ಮುಹಮ್ಮದ್ ಅವರ ಜೀವನದ ಸಂದೇಶ ನೀಡಿದರು.

ಹೊಸಮಜಲಿನ ಖತಿಬರಾದ ಮಜೀದ್ ಸಕಾಫಿ ಮಲ್ಲಿ, ಜಮಾತಿನ ಅಧ್ಯಕ್ಷ ಅಬ್ದುಲ್ ರಹಿಮಾನ್, ನೆಲ್ಯಾಡಿ ಅಯ್ಯಾತ್ ಇಸ್ಲಾಂ ಇಸ್ಲಾಂ ಮದರಸದ ಇಸ್ಮಾಯಿಲ್ ಸವಧಿ, ಮೊಹಮ್ಮದ್ ರಫೀಕ್ ಆಲಂಪಾಡಿ, ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್, ಅಲ್ ಬದ್ರಿಯಾ ಎಜುಕೇಶನ್ ಅಧ್ಯಕ್ಷ ನಾಜಿಂ ಸಾಹೇಬ್, ಪಟ್ಟೆ ಮದರಸದ ಅಧ್ಯಕ್ಷ ಮಹಮ್ಮದ್ ಮೊರಂಕಳ, ಪಟ್ಟೆ ಸಮಿತಿಯ ಅಧ್ಯಕ್ಷ ಅಬ್ದುಲ್ ರಹೀಮಾನ್, ನೆಲ್ಯಾಡಿ ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಕೌಕ್ರಾಡಿ ಗ್ರಾಮ ಪಂಚಾಯಿತಿನ ಸದಸ್ಯ ಮಹಮ್ಮದ್ ಹನೀಫ್, ನೋಟರಿ ವಕೀಲರು ಇಸ್ಮಾಯಿಲ್ ನೆಲ್ಯಾಡಿ ಹಾಗೂ ಮಸೀದಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ನೆಲ್ಯಾಡಿ ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಸ್ವಾಗತಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿಯಲ್ಲಿ ಈದ್ ಮಿಲಾದ್ ಸಲಾತ್ ಮೆರವಣಿಗೆ ನಡೆಯಿತು. ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಸೀದಿ, ಮದ್ರಸಾಗಳಲ್ಲಿ ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು. ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳೂ ನಡೆದವು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Leave a Reply

error: Content is protected !!