ನೆಲ್ಯಾಡಿ ಸನಾ ಟಿವಿಎಸ್ ಶೋರೂಮ್ ನಲ್ಲಿ ಜುಪಿಟರ್ 110ಸಿಸಿ ಯ ಹೊಸ ಮಾಡೆಲ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಮಾಲಕ ಸದಾನಂದ.ಬಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜುಪಿಟರ್ 110ಸಿಸಿಯ ಮೊದಲ ಗ್ರಾಹಕ ಮ್ಯಾಕ್ಸಿ ಲೋಬೊ ಹಾಗೂ ದ್ವಿತೀಯ ಗ್ರಾಹಕ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ರಫೀಕ್ ಸೀಗಲ್ ಅವರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.
ಇದೀಗ ಮತ್ತಷ್ಟು ಹೊಸತನದೊಂದಿಗೆ ಟಿವಿಎಸ್ ಜುಪಿಟರ್ ಸ್ಕೂಟರ್ ಇದಾಗಿದೆ.
ಸದ್ಯ ಯಾವುದೇ ಸ್ಕೂಟರ್ ಖರೀದಿ ಮಾಡಬೇಕೆಂದರೆ ಕನಿಷ್ಠ 1ಲಕ್ಷ ರೂಪಾಯಿ ಅತ್ಯಗತ್ಯ. ಇದರ ನಡುವೆ ಇದೀಗ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110ಸ್ಕೂಟರ್ ಕೇವಲ 77,400 ರೂಪಾಯಿಗೆ(ಎಕ್ಸ್ ಶೋ ರೂ) ಲಭ್ಯವಿದೆ. ಅತಿ ಕಡಿಮೆ ಡೌನ್ ಪೇಮೆಂಟ್ ನೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಟೆಸ್ಟ್ ರೈಟ್ ಗೆ ಕೂಡ ಲಭ್ಯವಿದೆ.
ಟಿವಿಎಸ್ ಜುಪಿಟರ್ 110ಸಿಸಿ ವಿಶೇಷತೆ:
ಹೊಚ್ಚಹೊಸ ನೆಕ್ಸ್ಟ್ ಜೆನ್ 113.3ಸಿಸಿ ಎಂಜಿನ್, ಬಾಡಿ ಬ್ಯಾಲೆನ್ಸ್ ಟೆಕ್ 2.0, ಎರಡು ಹೆಲ್ಮೆಟ್ ಇಡಲು ಸ್ಥಳಾವಕಾಶ, ಮುಂಭಾಗದಲ್ಲಿ ಇಂಧನ ತುಂಬುವ ಸ್ಥಳ, ಇನ್ಫಿನಿಟಿ ಲೈಟ್ ಬಾರ್, ಎಲ್ ಇ ಡಿ ಹೆಡ್ ಲ್ಯಾಂಪ್, ಫಾಲೋಮಿ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಕಲರ್ ಎಲ್ ಸಿ ಡಿ ಆಫ್ ಆನ್ ಪಿಚ್ಚರ್ ಗಳ ಜೊತೆಗೆ TVS SmartXonnect ಫೈಂಡ್ ಮಿ ಪಿಚ್ಚರ್ ಡಿಸ್ಟೆನ್ಸ್ ಟುಎಂಫ್ಟಿ ಸೂಚನೆ, ಎವರೇಜ್ ಅಂಡ್ ರಿಯಲ್ ಟೈಮ್ ಇಂಧನ ದಕ್ಷತೆ, ಟರ್ನ್ ಸಿಗ್ನಲ್ ಲ್ಯಾಂಪ್ ರಿಸೆಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ರೋಟೊಪೆಟಲ್ ಡಿಸ್ಕ್ ಬ್ರೇಕ್ ಗಳು, ಪಿಯಾನೋ ಬ್ಲಾಕ್ ಫಿನಿಶ್, ಹಜಾರ್ಡ್ ಲ್ಯಾಂಪ್ ಗಳು, ಐ ಇ ಓ ಅಸಿಸ್ಟ್ ಹೊಂದಿರುವ ನೆಕ್ಸ್ಟ್ ಜನರೇಷನ್ ಲೈಟ್ ವೇಟ್, ಕಾಂಪ್ಯಾಕ್ಟ್ ಫ್ಯೂಚರಿಸ್ಟಿಕ್ ಇಂಜಿನ್ ಹೊಂದಿದ್ದು ಅತ್ಯುತ್ತಮ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಮತ್ತು ಅತ್ಯುತ್ತಮ ಇಂಧನ ದಕ್ಷತೆ ಒದಗಿಸುತ್ತದೆ. ಡ್ರಮ್ ಬ್ರೇಕ್ ಹಾಗೂ ರೆಟ್ರೋಪೆಟಲ್ ಡಿಸ್ಕ್ ಬ್ರೇಕ್ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಬ್ರೇಕಿಂಗ್ ವ್ಯವಸ್ಥೆ ಇದೆ. ಆಟೋ ಟರ್ನ್ ಸಿಗ್ನಲ್, ಲ್ಯಾಂಪ್ ರೆಸ್ಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ಹಜಾರ್ಡ್ ಲ್ಯಾಂಪ್ ಮತ್ತು ಹೆಚ್ಚು ಸುರಕ್ಷತೆ ಒದಗಿಸುವ ಮೆಂಟಲ್ ಮ್ಯಾಕ್ಸ್ ಬಾಡಿ ಹೊಂದಿದೆ. ಉದ್ದ ಸೀಟ್ ಜೊತೆಗೆ ಬಾಡಿ ಬ್ಯಾಲೆನ್ಸ್ 2.0 ಸೌಕರ್ಯ ಇರುವುದರಿಂದ ರೈಡಿಂಗ್ ನಿರ್ವಹಣೆ ಮತ್ತು ಆರಾಮದಾಯಕತೆ ಅದ್ಭುತವಾಗಿದೆ.
ಹೊಸ ಜುಪಿಟರ್ ನ ಬುಕಿಂಗ್ಸ್ ತೆರೆದಿದ್ದು ಟೆಸ್ಟ್ ಡ್ರೈವ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸನಾ ಟಿ ವಿ ಎಸ್ ನೆಲ್ಯಾಡಿ, ದೂರವಾಣಿ ಸಂಖ್ಯೆ 7337809562/63/78