ಕೊಕ್ಕಡ: ಅರಸಿನಮಕ್ಕಿ -ಶಿಶಿಲ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಕೊಕ್ಕಡ ಸರಕಾರಿ ಆಸ್ಪತ್ರೆಯ ಬಾವಿಯ ಸ್ವಚ್ಛತಾ ಕಾರ್ಯವು ಸೆ.21ರಂದು ನಡೆಸಲಾಯಿತು.
ಬಾವಿಯಲ್ಲಿ ವಿಪರೀತ ತ್ಯಾಜ್ಯ ವಸ್ತುಗಳಿದ್ದು ಕುಡಿಯಲು ಯೋಗ್ಯವಲ್ಲದ ನೀರಿನಂತಿತ್ತು ಇದನ್ನು ಮನಗಂಡ ಸ್ವಯಂಸೇವಕರಾದ ಅವಿನಾಶ್ ಭಿಡೆ, ಕೃಷ್ಣಪ್ಪಗೌಡ, ರಮೇಶ್ ಬೈರಗಟ್ಟ, ಕಿರಣ್ ಸಂಕೇಶ, ಮಾಧವ ಪೂಜಾರಿ ಮತ್ತು ರಶ್ಮಿತಾ ಅವರು ತುರ್ತಾಗಿ ಬಾವಿ ಸ್ವಚ್ಛತೆ ಮಾಡುವಲ್ಲಿ ಮುಂದಾದರು, ಬಾವಿಯಲ್ಲಿದ್ದ ಒಂದು ಟನ್ ಗಿಂತ ಅಧಿಕವಾಗಿದ್ದ ತ್ಯಾಜ್ಯಗಳನ್ನು ಹೊರತೆಗೆದು ಸ್ವಚ್ಛಗೊಳಿಸಲಾಯಿತು ಹಾಗೂ ಬಾವಿ ಬದಿಯಲ್ಲಿದ್ದ ಅಪಾಯಕಾರಿ ಮರವನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯಿತಿನ ಪಿಡಿಒ ದೀಪಕ್ ರಾಜ್ ಮತ್ತು ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಮತ್ತು ಡಾ.ತುಷಾರ ಉಪಸ್ಥಿತರಿದ್ದು ಸಹಕರಿಸಿದರು.