ಅಧ್ಯಕ್ಷರಾಗಿ ರಿತೇಶ್,ಕಾರ್ಯದರ್ಶಿಯಾಗಿ ಕಾವ್ಯ ಆಯ್ಕೆ
ನೆಲ್ಯಾಡಿ ವಿ ವಿ ಘಟಕ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಆಯ್ಕೆ ಸೆ.26ರಂದು ನಡೆಯಿತು.
ಅಧ್ಯಕ್ಷರಾಗಿ ರಿತೇಶ್, ಕಾರ್ಯದರ್ಶಿಯಾಗಿ ಕಾವ್ಯ, ಸಹ ಕಾರ್ಯದರ್ಶಿಯಾಗಿ ಪುನೀತ್ ಕುಮಾರ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ಭವ್ಯಶ್ರೀ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿಯಾಗಿ ನುಸ್ರೀಲ್ ಅಜೀಝ್ ಹಾಗೂ ಕ್ರೀಡಾ ಸಹ ಕಾರ್ಯದರ್ಶಿಯಾಗಿ ರಾಹುಲ್ ಆಯ್ಕೆಯಾದರು.
ವಿದ್ಯಾರ್ಥಿ ಸಂಘದ ಸಂಚಾಲಕ ಹಾಗೂ ಚುನಾವಣಾ ಅಧಿಕಾರಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನೂರಂದಪ್ಪ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮತ ಎಣಿಕೆ ಅಧಿಕಾರಿ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯ ದೈಹಿಕ ಶಿಕ್ಷಣ ನಿರ್ದೇಶಕ ಪಾವನಕೃಷ್ಣ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪಾವನಾ.ರೈ ಅವರ ಉಸ್ತುವಾರಿಯಲ್ಲಿ ಮತ ಎಣಿಕೆ ನಡೆಯಿತು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ ಪಿ. ಅವರು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ, ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ಕಾಲೇಜಿನ ಹಿತರಕ್ಷಣೆ, ಶಾಂತಿ ಹಾಗೂ ಶೈಕ್ಷಣಿಕವಾಗಿ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿದರು.
ವಿದ್ಯಾರ್ಥಿ ಸಂಘದ ಸಂಚಾಲಕರು, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಡಾ.ನೂರಂದಪ್ಪ, ಸದಸ್ಯರಾದ ಚಂದ್ರಕಲಾ.ಬಿ. ವನಿತಾ.ಪಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುರೇಶ್ ಕೆ., ಡಾ.ಪುರುಷೋತ್ತಮ ಅವರ ಸಹಯೋಗದಲ್ಲಿ ಚುನಾವಣಾ ಪ್ರಕ್ರಿಯೆಯು ಆಯೋಜಿಸಲಾಗಿತ್ತು.
ಮತದಾನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.