ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ನೋಬಲ್ ವರ್ಲ್ಡ್ ರಿಕೋರ್ಡ್ಸ್ ವಿಶ್ವ ದಾಖಲೆ ಡೇವಿಡ್ ಜೈಮಿ ಕೊಕ್ಕಡ ಅವರಿಗೆ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ: ಜಲ ಸಂರಕ್ಷಣಾ ವಿಧಾನಗಳು ಮತ್ತು ಅದನ್ನು ಜನ ಸಾಮಾನ್ಯರಿಗೆ ತಲುಪಿಸುವ ಜಾಗೃತಿ, ಅಭಿಯಾನಗಳ ಮೂಲಕ ಮಳೆ ಕೊಯ್ಲು ಫಿಲ್ಟರ್ ಬಳಸಿಕೊಂಡು ಬಾವಿ ಮತ್ತು ಬೋರ್ವೆಲ್‌ಗಳಿಗೆ ಮರುಪೂರಣ ಮಾಡುವಂತೆ ಪ್ರೇರಣೆ ನೀಡಿ, ಅಂತರ್ಜಲ ವೃದ್ಧಿಯಲ್ಲಿ ವಿಶೇಷ ಕೊಡುಗೆಯನ್ನು ನೀಡಿದ ಡೇವಿಡ್ ಜೈಮಿ ಕೊಕ್ಕಡ ಅವರನ್ನು, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ಸನ್ಮಾನಿಸಲಾಯಿತು.

ಅವರು ಅಳವಡಿಸಿದ ಆರು ಜಲ ಸಂರಕ್ಷಣಾ ವಿಧಾನಗಳು ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆ ಎಂದೇ ಗುರುತಿಸಿಕೊಳ್ಳಲಾಗಿದೆ. ಜಾಗತಿಕ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯಲ್ಲಿನ ಸೇವೆಯನ್ನು ಧರ್ಮಗುರು ವಂದನೀಯ ಫಾ.ಶಾಜಿ ಮಾತ್ಯು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಚರ್ಚಿನ ಟ್ರಸ್ಟಿಗಳಾದ ಜೋಬಿನ್, ಅಲ್ಬಿನ್, ಶಿಬು, ಅಲೆಕ್ಸ್, ಸಂಡೆ ಸ್ಕೂಲ್‌ನ ರೊಯ್, ವಿದ್ಯಾರ್ಥಿ ಮುಖಂಡ ಆಲ್ಟೊ ಮತ್ತು ವಂ.ಸಿಸ್ಟರ್ ಎಲ್ಸ್ಲಿಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

error: Content is protected !!