ಕೊಕ್ಕಡ: ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತವನ್ನಾಗಿಸಿ – ಮುಖ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್

ಶೇರ್ ಮಾಡಿ

ನೇಸರ ಫೆ.27: ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು.ಪೋಲಿಯೋ ಒಂದು ಭಯಾನಕ ರೋಗ,ಈ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ.5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ.ಭಾರತದಲ್ಲಿ 2011 ರಿಂದ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ.ವಿಶ್ವ ಆರೋಗ್ಯ ಸಂಸ್ಥೆ(WHO)ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ.ಆದಾಗ್ಯೂ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಮಲಾವಿಯಲ್ಲಿ ಕೆಲವು ಪ್ರಕರಣಗಳು ವರದಿಯಾಗಿವೆ.ಈ ಹಿನ್ನೆಲೆಯಲ್ಲಿ ಈ ವರ್ಷ ಭಾರತ ಸರ್ಕಾರದ ಮಾರ್ಗ ದರ್ಶನದಂತೆ 27-02-2022 ರಿಂದ 02-03-2022 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
“ಪೊಲೀಯೊಮ್ಯೇಲಿಟೆಸ್” ಇದನ್ನು ಪೊಲೀಯೊ ಕರೆಯುತ್ತಾರೆ.ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ.ಈ ರೋಗವು ಸಾಂಕ್ರಾಮಿಕ ರೋಗ.ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ.ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಈ ಪಲ್ಸ್ ಪೊಲೀಯೊ ಕಾರ್ಯಕ್ರಮ ಎರಡು ಹಂತದ್ದಾಗಿದ್ದು. ಇದನ್ನು ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಹಾಕಲಾಗುತ್ತದೆ.ರಾಷ್ಟ್ರೀಯ ಆರೋಗ್ಯ ಅನ್ವಯ ಪಲ್ಸ್ ಪೊಲೀಯೊ ಕಾರ್ಯಕ್ರಮ ಭಾನುವಾರ ದೇಶದಾದ್ಯಂತ ಜಾರಿಗೊಂಡಿತು.ಐದು ವರ್ಷ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ. ಪೋಷಕರು ತಮ್ಮ 5 ವರ್ಷ ದೊಳಗಿನ ಎಲ್ಲಾ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿಕೊಳ್ಳಬೇಕು.ದೇಶದಾದ್ಯಂತ ಪಲ್ಸ್ ಲಸಿಕೆ ಹಾಕಲಾಗುತ್ತಿದೆ.ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತವನ್ನಾಗಿಸಿ,ಎಲ್ಲರೂ ಕೈ ಜೋಡಿಸಿ ಎಂದು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ಆರೋಗ್ಯ ಶುಶ್ರೂಷಕಿರಾದ ಶ್ರೀಮತಿ ಸುನಿಜ, ಶ್ರೀಮತಿ ಮಾಲಿನಿ, ಆಸ್ಪತ್ರೆಯ ಸಿಬ್ಬಂದಿಗಳು,ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತೆಯರು ಉಪಸ್ಥಿತರಿದ್ದರು.

ಮನೆಮನೆ ಯಕ್ಷಗಾನ ವೀಕ್ಷಿಸಿ Subscribers ಮಾಡಿ

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚೈಲ್ಡ್ ಫಂಡ್ ಸಂಸ್ಥೆಯವರು ನೀಡಿದ ಮಕ್ಕಳ ಆಟಿಕೆಯ ವಸ್ತುಗಳನ್ನು ಆರೋಗ್ಯ ಕೇಂದ್ರದ ಮುಂದೆ ಅಳವಡಿಸಲಾಗಿತ್ತು. ಪೋಲಿಯೋ ಲಸಿಕೆ ಪಡೆಯಲು ಬಂದ ಪುಟಾಣಿ ಮಕ್ಕಳು ನಮ್ಮ ಪಾಲಕರ ಜೊತೆಯಲ್ಲಿ ಆಟವಾಡಿ ಸಂತೋಷಪಟ್ಟರು ಹಾಗೂ ಅಚ್ಚುಕಟ್ಟಾಗಿ ನಿರ್ವಹಣೆಯನ್ನು ಮಾಡುತ್ತಿರುವುದರ ಬಗ್ಗೆ ಪಾಲಕರು ಸಂತಸವನ್ನು ವ್ಯಕ್ತಪಡಿಸಿದರು.

—ಜಾಹೀರಾತು—

Leave a Reply

error: Content is protected !!