ನೆಟ್ಟಣ: ಕಸ್ತೂರಿ ರಂಗನ್ ವರದಿ ಜಾರಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ, ಬಸ್ಸು ಹೋದ ಮೇಲೆ ಕೈ ತೋರಿಸಿ ಪ್ರಯೋಜನವಿಲ್ಲ! ನವಂಬರ್ 15ರ ಜಿಲ್ಲಾ ಮಟ್ಟದ ಪ್ರತಿಭಟನೆಗೆ ಪಕ್ಷಾತಿತವಾಗಿ, ಜಾತ್ಯಾತಿತವಾಗಿ ಎಲ್ಲರೂ ಕೈಜೋಡಿಸಿ ಧರ್ಮಗುರು ಫಾ.ಆದರ್ಶ್ ಜೋಸೆಫ್
ಪಶ್ಚಿಮ ಘಟ್ಟದ ತಪ್ಪಲಿನ ಅಂಚಿನಲ್ಲಿರುವ ಗ್ರಾಮಗಳಿಗೆ ಹಾಗೂ ರೈತರ ಕೃಷಿ ಜಾಗಗಳಿಗೆ ಕಸ್ತೂರಿ ರಂಗನ್ ವರದಿಯಿಂದ ಆಗುವ ತೊಂದರೆಗಳ ವಿರುದ್ದ ‘ಮಲನಾಡು ಜನ ಹಿತ ರಕ್ಷಣಾ ವೇದಿಕೆಯ’ ನೇತೃತ್ವದಲ್ಲಿ ನವೆಂಬರ್ 15ರಂದು ಗುಂಡ್ಯದಲ್ಲಿ ನಡಯಲಿರುವ ಜಿಲ್ಲಾ ಮಟ್ಟದ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ಸಾರ್ವಜನಿಕರು ಕೊಡಬೇಕಾಗಿದೆ. ಹತ್ತು ಹಲವಾರು ಸಮಸ್ಯೆಗಳಿಂದ ನಮ್ಮ ರೈತರು ಮಾನಸಿಕ ಹಿಂಸೆಗೆ ಒಳಗಾಗುತ್ತಿದೆ. ಅದರಲ್ಲಿ ಅವೈಜಾನಿಕ ಕಸ್ತೂರಿ ರಂಗನ್ ವರದಿ, ಪಶ್ಚಿಮ ಘಟ್ಟ ಮತ್ತು ಜನವಸತಿ ಕೇಂದ್ರಗಳ ಗಡಿ ಗುರುತು ಆಗದೇ ಇರುವುದು, ಫ್ಲೋಟಿಂಗ್ ಸಮಸ್ಯೆ, ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಆಗದೇ ಇರುವುದು. ಈ ಎಲ್ಲಾ ಸಮಸ್ಯೆಗಳಿಂದ ರೈತರ ಬದುಕು ತ್ರಿಶಂಕು ಲೋಕದಲ್ಲಿ ಇದೆ. ಅದುದ್ದರಿಂದ ಎಲ್ಲಾ ರೈತರು, ಭಾಧಿತ ಗ್ರಾಮಸ್ಥರು, ಸಂಘ ಸಂಸ್ಥೆಗಳು ಪಕ್ಷತಿತಾವಾಗಿ, ದರ್ಮಾತಿತವಾಗಿ ಈ ಹೋರಾಟಕ್ಕೆ ಬೆಂಬಲ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ರೈತರಿಗೆ ಮಾನಸಿಕ ಒತ್ತಡ ಕೊಡುವಂತ ಈ ಸಮಸ್ಯೆಗಳಿಗೆ ತಾರ್ಕಿಕವಾದ ಅಂತ್ಯ ಕಾಣುವ ತನಕ ಹೋರಾಟ ಮುಂದುವರಿಸಬೇಕಾಗಿದೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಕೊಡಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಬಸ್ಸು ಹೋದ ಮೇಲೆ ಕೈ ತೋರಿಸಿದರೆ ಯಾವುದೇ ಪ್ರಯೋಜನವಿಲ್ಲ ರೈತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುವ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ವಿರುದ್ದ ಎಲ್ಲರೂ ಪ್ರತಿಭಟನೆಗೆ ಕೈ ಜೋಡಿಸಬೇಕು ಎಂದು ಗುತ್ತಿಗಾರು, ನೆಟ್ಟಣ ಧರ್ಮಗುರು ಫಾ.ಆದರ್ಶ್ ಜೋಸೆಫ್ ಕರೆ ನೀಡಿದರು.