ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಶೇರ್ ಮಾಡಿ

ಕೊಕ್ಕಡ: ಜಗತ್ತಿಗೆ ವಾಸ್ತವ ಸತ್ಯ ಗೊತ್ತಾಗಿದೆ ಧರ್ಮದ ಹೆಸರಿನ ಅಧರ್ಮ, ಸಾತ್ವಿಕತೆಯ ಮುಖವಾಡದ ಒಳಗಿನ ಅಸಾತ್ವಿಕ ಶಕ್ತಿ ಹೊರಗಡೆ ಬಂದಿದೆ. ದೇವರ ಸೇವೆ ಎಂಬ ಹೆಸರಿನಲ್ಲಿ ತಾನು ನಂಬಿದ ಸಿದ್ಧಾಂತಕ್ಕೆ ಬೇಕಾಗಿ ಅಧರ್ಮವನ್ನು ಮಾಡಿರುವುದು ಹೊರಗಡೆ ಗೊತ್ತಾಗಿದೆ. ನಾವೆಲ್ಲ ಇಲ್ಲಿ ಒಟ್ಟು ಸೇರಿರುವುದು ಧಾರ್ಮಿಕವಾಗಿ. ದೇವರ ಭೂಮಿ ದೇವರಿಗೆ ಸಿಗಬೇಕೆಂಬ ದೃಷ್ಟಿಯಿಂದ, ಲಕ್ಷಾಂತರ ಭಕ್ತಾದಿಗಳಿಗೆ ನಂಬುವಂತ ಕ್ಷೇತ್ರದ ಜಾಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ನೀಡಿರುವುದು ಸರಿಯಲ್ಲ. ಧರ್ಮ ಅಂದ್ರೆ ಸಿದ್ದಾಂತವಲ್ಲ, ನೀವೆಲ್ಲ ವೈಚಾರಿಕ ಹಿಂದುತ್ವದಲ್ಲಿ ಇದ್ದೀರಿ ಅದುವೇ ನಿಮಗೆ ದೊಡ್ಡ ಸಮಸ್ಯೆ ಆಗಿರುವುದು. ಹೋರಾಟದ ದಿಕ್ಕು ತಪ್ಪಿಸುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವುದು ಹಾಗೂ ಪಕ್ಷವನ್ನು ಎತ್ತಿ ಕಟ್ಟಿ ಕೆಲಸವನ್ನು ಮಾಡುವುದು ವಿರೋಧಿಗಳ ಅಸ್ತ್ರವಾಗಿದೆ ಎಂದು ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ನ ಲಕ್ಷ್ಮೀಶ ಗಬಲಾಡ್ಕ ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯಿಂದ ನ.11ರಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ದೇವರ ಮುಂದೆ ಪ್ರಾರ್ಥನೆ ನೆರವೇರಿಸಿ, ಧರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಲಕ್ಷ್ಮೀಶ ಗಬಲಾಡ್ಕ ಮಾತನಾಡಿದರು.

ಈ ವೇಳೆ ಸಂರಕ್ಷರಣಾ ವೇದಿಕೆಯರು ಹಾಗೂ ಗಣ್ಯರು ಮಾತನಾಡಿ ದೇವಳದ ಭಕ್ತಾದಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಾ ಬರುತ್ತಿರುವ ಕಾರಣಕ್ಕೆ ಭಕ್ತಾದಿಗಳಿಗೆ ಮತ್ತು ಅವರ ವಾಹನಗಳಿಗೆ ವ್ಯವಸ್ಥೆ ಮಾಡುವ, ಭಕ್ತಾದಿಗಳಿಗೆ ಅಗತ್ಯ ಪೂಜಾ ಸಾಮಾಗ್ರಿಗಳನ್ನು ಒದಗಿಸುವ ಅಂಗಡಿ ಮುಗ್ಗಟ್ಟುಗಳನ್ನು ಪ್ರಾರಂಭಿಸುವ, ಭಕ್ತಾಧಿಗಳಿಗೆ ವಸತಿ ಗೃಹ ನಿರ್ಮಿಸುವ, ಇತ್ಯಾದಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 2004ರಲ್ಲಿ ಭಕ್ತರ ದೇಣಿಗೆ ಹಣದಿಂದ 3.46 ಎಕರೆ ಜಾಗ ಖರೀದಿಸಲಾಗಿತ್ತು. ಅದರಲ್ಲಿ ದೇವಾಲಯದ ಸ್ವಂತ ಖರ್ಚಿನಿಂದಲೇ ವಾಣಿಜ್ಯ ಕಟ್ಟಡ, ವಸತಿ ಗೃಹ ನಿರ್ಮಾಣವಾಗಿದೆ. ಈಗ ಅದರ ಆದಾಯ ಹಾಗೂ ಭೂಮಿ ದೇವಾಲಯಕ್ಕೆ ಸಿಗದೆ ಖಾಸಗಿ ಟ್ರಸ್ಟ್‌ಗೆ ಸಂದಾಯವಾಗುತ್ತಿದೆ. ದೇವಾಲಯ ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಈ ಆಸ್ತಿ ದೇವಾಲಯಕ್ಕೆ ಸೇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿದರು, ಉಪಾಧ್ಯಕ್ಷರುಗಳಾದ ಕೃಷ್ಣ ಭಟ್ ಕುಡ್ತಲಾಜೆ, ತುಕ್ರಪ್ಪ ಶೆಟ್ಟಿ ನೂಜಿ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ್ ಶೆಟ್ಟಿ ನೆಲ್ಯಾಡಿ, ಕಾರ್ಯದರ್ಶಿ ಶ್ಯಾಮರಾಜ್, ಕೋಶಾಧಿಕಾರಿ ವಿಶ್ವನಾಥ್ ಕೊಲ್ಲಾಜೆ, ಶ್ರೀವತ್ಸ ಕುಡ್ತಲಾಜೆ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಕೊಕ್ಕಡ ವಲಯ ವಿಶ್ವ ಹಿಂದೂ ಪರಿಷತ್ತಿನ ನಿಕಟ ಪೂರ್ವಾಧ್ಯಕ್ಷ ತುಕ್ರಪ್ಪ ಶೆಟ್ಟಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ದಾಮೋದರ ಶೆಟ್ಟಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಶಗ್ರಿತ್ತಾಯ, ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ ಗೌಡ ಅಡ್ಕಾಡಿ, ದ.ಕ ಹವ್ಯಾಕ ಬಂಧುಗಳ ಮಾಣಿ ಮಠದ ವೈದಿಕ ಕೇಶವ ಪ್ರಸಾದ್, ನೆಲ್ಯಾಡಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸರ್ವೋತ್ತಮ ಗೌಡ, ಸಾಮಾಜಿಕ ಮುಖಂಡ ಬಿ ಎಂ ಭಟ್, ಗೋಪಾಲ ಕೃಷ್ಣ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ.ರಾಜಾರಾಮ್.ಕೆ.ಬಿ. ಹಾಲಿ ಸದಸ್ಯ ವೆಂಕಪ್ಪ ಪೂಜಾರಿ, ಬೆಳ್ತಂಗಡಿ ಗುರು ನಾರಾಯಣ ಸೇವಾ ಸಂಘದ ಜಯವಿಕ್ರಮ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರೂಪೇಶ್ ರೈ ಆಲಿಮಾರ್, ಸಹಕಾರ್ಯದರ್ಶಿಗಳಾದ ಸುನೀಶ್ ನಾಯ್ಕ, ದಯಾನೀಶ್ ಕೊಕ್ಕಡ, ಗಣೇಶ್ ಕಾಶಿ, ಸಮಿತಿ ಸದಸ್ಯರುಗಳಾದ ಲಕ್ಷ್ಮೀನಾರಾಯಣ ಉಪ್ಪರ್ಣ, ಗೋಪಾಲ ಕೃಷ್ಣ ಭಟ್ ಮುನ್ನಡ್ಕ, ಜಾರಪ್ಪ ಗೌಡ ಸಂಕೇಶ, ಎ.ಎನ್.ಶಬರಾಯ, ಚರಣ್ ಕೊಕ್ಕಡ, ಪದ್ಮನಾಭ ಆಚಾರ್ಯ, ಗಣೇಶ್ ಪಿ.ಕೆ, ಧನಂಜಯ ಗೌಡ ಪಟ್ರಮೆ, ಧರ್ಮರಾಜ್ ಅಡ್ಕಾಡಿ, ಶೀನ ನಾಯ್ಕ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಗೌಡ ಪೂವಾಜೆ, ವಿಶ್ವನಾಥ ಮೀಯಾಳ, ಗಣೇಶ್ ಪೂಜಾರಿ, ಜಯಂತ ಗೌಡ ಮಾಸ್ತಿಕಲ್ಲು, ಪ್ರಗತಿಪರ ಕೃಷಿಕ ಯೋಗೀಶ್ ಕೋಡಿಂಬಾಡಿ, ಶಿವಪ್ರಸಾದ್, ಪ್ರಭಾಕರ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!