
ಫೆಂಗಲ್ ಚಂಡಮಾರುತದ ಪರಿಣಾಮ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿದೆ. ಹೆದ್ದಾರಿ ಬದಿ ಗೇಲ್ ಗಾಸ್ ಕಂಪನಿ ಅಗೆದಿದ್ದ ಹೊಂಡದಲ್ಲಿ ನೀರು ತುಂಬಿ ಕೂಳೂರು ಬಳಿ ಮಂಗಳೂರು – ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಹೆದ್ದಾರಿ ಬದಿ ಗೇಲ್ಗಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಆ ಗುಂಡಿಯಲ್ಲೇ ಇದೀಗ ಮಳೆ ನೀಡು ಶೇಖರಣೆಗೊಂಡು ಹೆದ್ದಾರಿ ಕುಸಿದಿದೆ. ಬೈಕ್, ಕಾರು, ಲಾರಿಗಳು ಪಾಸ್ ಆಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ.
ಬೈಕ್, ಕಾರು, ಲಾರಿಗಳು ಪಾಸ್ ಆದ ತಕ್ಷಣ ಏಕಾಏಕಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಜಸ್ಟ್ ಮಿಸ್ ಆಗಿದ್ರು ವಾಹನಗಳು ಹೊಂಡದೊಳಗೆ ಇರುತ್ತಿದ್ದವು. ಇನ್ನು ರಸ್ತೆ ಕುಸಿತದ ಪಕ್ಕದಲ್ಲೇ ಭಾರೀ ವಾಹನಗಳು ಸಂಚರಿಸುತ್ತಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಇದೆ.






