“ಎಂಚ ಉಲ್ಲ ಬಜ್ಪೆದ ಜಂಟ್ಸ್, ವಣಸಾಂಡಾ ?” ಹೀಗೆಂದು ತುಳು ಭಾಷೆಯಲ್ಲಿ ಮಾತನಾಡಿ ಬಜಪೆಯ ಕ್ರೀಡಾಪ್ರೇಮಿಗಳನ್ನು ಉದ್ದೇಶಿಸಿ ಹೇಳಿದವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್.
ಬಜಪೆ ಲೆಜೆಂಡ್ಸ್ ಟ್ರಸ್ಟ್ ಸಂಯೋಜನೆಯಲ್ಲಿ ಬಜಪೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ಬಜಪೆ ಪ್ರೀಮಿಯರ್ ಲೀಗ ಸೀಸನ್ – 2 ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಡಿ.29 ಭಾನುವಾರ ರಾತ್ರಿ ಮೊಹಮ್ಮದ್ ಅಜರುದ್ದೀನ್ ಅವರು ಆಗಮಿಸಲಿದ್ದಾರೆ. ರಾತ್ರಿ 8:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ 9:30ಕ್ಕೆ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆಗಮಿಸಲಿದ್ದಾರೆ.
ಕ್ರಿಕೆಟಿಗ ಅಜರುದ್ದೀನ್ ತುಳುವಿನಲ್ಲಿ ಮಾತು ಆರಂಭಿಸಿ ಬಜ್ಪೆ ಜನತೆಯನ್ನು ಅಭಿನಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಂಡಿದ್ದು ‘ಪಂದ್ಯಾವಳಿ ಪ್ರಸರಣ ನೆರವಿನ ಉದ್ದೇಶಕ್ಕೆ ಸಂಯೋಜನೆಗೊಂಡಿರುವುದು ಖುಷಿಕೊಟ್ಟಿದೆ. ಇಂತಹುದೇ ಟೂರ್ನಮೆಂಟ್ ಬೇರೆ ಕಾರ್ಯಗಳಲ್ಲೂ ಸಂಯೋಜನೆಗೊಳ್ಳಬಾರದೆ’ ಎಂದು ಅವರು ಆಮಂತ್ರಣ ವೀಡಿಯೋದಲ್ಲಿ ತಿಳಿಸಿದ್ದಾರೆ.
ರೋಹನ್ ಕಾರ್ಪೋರೇಶನ್ ನ ರೋಹನ್ ಮೊಂಥೆರೋ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.