ಬೆಳ್ತಂಗಡಿ ರೋಟರಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಸ್ಟೇಷನ್, ಗ್ರಾಮ ಪಂಚಾಯಿತಿ ಮುಂಡಾಜೆ, ಮುಂಡಾಜೆ ಪದವಿ ಪೂರ್ವ ಕಾಲೇಜು ಮುಂಡಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸೈಬರ್ ಅಪರಾಧ ಜಾಗೃತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿವೈಎಸ್ಪಿ, ಮಂಜುನಾಥ.ಬಿ.ಜಿ, ಎಸ್.ಐ ಮಂಜುನಾಥ ಟಿ, ಇವರು ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಮಾತ್ರವಲ್ಲದೇ ವಿದ್ಯಾವಂತರು ಕೂಡ ಬಲಿಯಾಗುತ್ತಿರುವ ಸೈಬರ್ ಅಪರಾಧ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿಯ ಕಾರ್ಯದರ್ಶಿ, ರೊ|ಸಂದೇಶ ರಾವ್, ರೊ| ಮೇಜರ್ ಜನರಲ್, ಎಂ.ವಿ.ಭಟ್, ರೊ| ಗಾಯತ್ರಿ.ಟಿ, ಪಿಡಿಓ, ಗ್ರಾಮ ಪಂಚಾಯಿತಿ ಮುಂಡಾಜೆ, ಸುಮಲತಾ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಮುಂಡಾಜೆ, ಗೀತಾ, ಇತಿಹಾಸ ಉಪನ್ಯಾಸಕಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಲತೇಶ್ ನಿರ್ವಹಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ನಮಿತಾ.ಕೆ.ಆರ್ ಸ್ವಾಗತಿಸಿದರು, ಕುಮಾರಿ ಛಾಯ ವಂದಿಸಿದರು.