ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯ ಮಾದೇರಿ ಒಕ್ಕೂಟ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಇದರ ವತಿಯಿಂದ ಕುಣಿತ ಭಜನಾ ಉದ್ಘಾಟನಾ ಸಮಾರಂಭವು ಪುಚ್ಚೇರಿ ಶಾಲೆಯಲ್ಲಿ ನಡೆಯಿತು.
ಮಾದೇರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಗುಮ್ಮಣ್ಣ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಊರಿನ ಮುಖ್ಯಸ್ಥರಾದ ಜನಾರ್ದನ ಗೌಡ ಪಿಲವೂರು ಅಧ್ಯಕ್ಷತೆಯನ್ನು ವಹಿಸಿದರು. ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿಯನ್.ಪಿ. ಜೆ, ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಅಧ್ಯಕ್ಷರಾದ ಸುಂದರ ಗೌಡ ಬಿಳಿನೆಲೆ, ಕುಡ್ತಾಜೆ ದೈವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ತೋಟ, ಗೆಳೆಯರ ಬಳಗದ ಅಧ್ಯಕ್ಷರಾದ ನಾಗೇಶ್ ಗೌಡ, ಮಾದೇರಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶಿವರಾಮ ಗೌಡ, ನಿವೃತ್ತ ಪ್ರಾಚಾರ್ಯ ದುಗ್ಗಪ್ಪ ಗೌಡ, ನೆಲ್ಯಾಡಿ ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ, ಕೌಕ್ರಾಡಿ ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ತರಬೇತಿದಾರರಾದ ತಿರುಮಲೇಶ್ವರ, ಸರಸ್ವತಿ ಭಜನಾ ಮಂದಿರದ ಅಧ್ಯಕ್ಷರು ತಿಮ್ಮಪ್ಪ ಕುಂಬಾರ, ಕೌಕ್ರಾಡಿ ಧರ್ಮಶ್ರೀ ಕುಣಿತ ಭಜನೆಯ ಸದಸ್ಯರಾದ ನವ್ಯ, ನೆಲ್ಯಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹೇಮಾವತಿ, ಒಕ್ಕೂಟದ ಕಾರ್ಯದರ್ಶಿ ಕಮಲಾಕ್ಷ ಗೌಡ, ಪದಾಧಿಕಾರಿ ಭವಾನಿ, ಸೇವಾ ಪ್ರತಿನಿಧಿಗಳಾದ ಸಂತೋಷ್, ಕವಿತಾ ಹಾಗೂ ನೂತನ ಕುಣಿತ ಭಜನಾ ಮಂಡಳಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭವ್ಯ ಕೊರಡೇಲು ಸ್ವಾಗತಿಸಿದರು, ಅಮಿತಾ ಕಾರ್ಯಕ್ರಮ ನಿರೂಪಿಸಿದರು, ಯಶ್ವಿನಿ ಕೊರಡೇಲು ವಂದಿಸಿದರು.