ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಜ.27 ರಂದು ನಡೆಯಲಿದ್ದು ಸಹಕಾರ ಭಾರತೀಯ ಅಭ್ಯರ್ಥಿಗಳ ಆಯ್ಕೆ ಘೋಷಣೆಯು ಪಟ್ರಮೆ ಶಕ್ತಿ ಕೇಂದ್ರ ಪ್ರಮುಖ್ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಜ.5ರಂದು ನಡೆಯಿತು.
ಸಭೆಯಲ್ಲಿ ಮಂಡಲ ಪ್ರಭಾರಿ ಪ್ರೀತಮ್.ಡಿ. ಧರ್ಮಸ್ಥಳ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ್ ಪೂವಾಜೆ, ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಮಂಡಲದ ಪ್ರಮುಖರು, ಬೂತ್ ಅಧ್ಯಕ್ಷರುಗಳಾದ ಕಿರಣ್, ಶಶಿಕುಮಾರ್, ಲಿಂಗಪ್ಪ ಗೌಡ, ಕಮಲಾಕ್ಷ ಗುಂಡಿಲೇ, ಕಾರ್ಯದರ್ಶಿಗಳಾದ ರವಿಚಂದ್ರ, ಶ್ರೀಧರ್ ಡಿ.ಕೆ. ಕಿಶೋರ್ ಪೋಯ್ಯೋಲೆ ಮತ್ತು ಕೊಕ್ಕಡ- ಪಟ್ರಮೆ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಬೆಳ್ತಂಗಡಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಳಂಬಿಲ ಸಹಕಾರ ಭಾರತೀಯ 12 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.
ಅಭ್ಯರ್ಥಿಗಳಾಗಿ ಕುಶಾಲಪ್ಪ ಗೌಡ ಪೂವಾಜೆ, ವಿಠಲ್ ಭಂಡಾರಿ, ವಿಶ್ವನಾಥ್ ಕಕ್ಕುದೋಲಿ, ಪದ್ಮನಾಭ ಕಾಯಿಲ, ಪ್ರೇಮಾವತಿ ಕಲ್ಲಾಜೆ, ಶ್ರೀನಾಥ್ ಬಡೆಕಾಯಿಲ್, ಸುನಿಲ್ ಕೊಲ್ಲಾಜೆ, ಉದಯ್ ರಾವ್ ಅನಾರು, ಮಹಾಬಲ ಶೆಟ್ಟಿ ಪಟ್ಟೂರು, ಅಶ್ವಿನಿ ರವಿ ನಾಯ್ಕ ಓಣಿತ್ತಾರ್, ಮುತ್ತಪ್ಪ ಕೊಕ್ಕಡ, ರವಿಚಂದ್ರ ಪುಡಿಕೆತ್ತೂರ್ ಇವರುಗಳನ್ನು ಅಂತಿಮಗೊಳಿಸಲಾಯಿತು.