ಟಿ.ನಾರಾಯಣ ಭಟ್ ರಾಮಕುಂಜ ಅವರ “ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು” ಕೃತಿ ಬಿಡುಗಡೆ.

ಶೇರ್ ಮಾಡಿ

ನೆಲ್ಯಾಡಿ:ಟಿ.ನಾರಾಯಣ ಭಟ್ ರಾಮಕುಂಜ ಅವರು ಬರೆದಿರುವ “ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು” ಭಾವಾಂತರಂಗದ ನುಡಿಬಿಂದುಗಳು ಎಂಬ ಕೃತಿ ಇತ್ತೀಚೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಪೂಜ್ಯರ ಪಂಚಮ ಆರಾಧನಾ ಮಹೋತ್ಸವದಲ್ಲಿ, ಉಡುಪಿ ಪೇಜಾವರ ಮಠಾಧೀಶ ಡಾ. ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ಇದು ಪೂಜ್ಯರ ಬಗೆಗೆ ನಾರಾಯಣ ಭಟ್ ಬರೆದ 7ನೆಯ ಕೃತಿ ಆಗಿದೆ.

ವಿಶ್ವೇಶತೀರ್ಥರಗರಡಿಯಲ್ಲಿ ಪಳಗಿದ ಅವರದೇ ಹುಟ್ಟೂರ ಹಾಗೂ ಕಲಿತ ಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ದುಡಿದ ನಾರಾಯಣ ಭಟ್ ಅವರಿಗೆ ತನ್ನ ಗುರುಗಳ ಬಗ್ಗೆ ಎಷ್ಟು ಬರೆದರು ಸಾಲದೆಂಬಂತೆ ಮತ್ತೆ ಮತ್ತೆ ಕೃತಿಗಳನ್ನು ರಚಿಸುತ್ತಿರುವುದು ಇವರ ಗುರು ಭಕ್ತಿಯ ದ್ಯೋತಕವೆನಿಸಿದೆ. ಮಕ್ಕಳಿಗಾಗಿ ಹಾಗೂ ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸಾಹಿತ್ಯ, ಶೈಕ್ಷಣಿಕ, ಸಮಾಜ ಸೇವೆ ಆದರ್ಶ ಪ್ರಾಯವಾಗಿದೆ. ಸುಮಾರು ಅರ್ಧ ಶತಕದಷ್ಟು ಮಕ್ಕಳ ಕೃತಿಗಳನ್ನು ರಚಿಸುತ್ತಾ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುತ್ತಾರೆ ಹಾಗೂ ಗುರುಗಳ ಆರಾಧನಾ ಮಹೋತ್ಸವದಲ್ಲಿ ಪೂಜ್ಯರ ಶೈಕ್ಷಣಿಕ ಕಾಳಜಿಯ ಬಗೆಗೆ ವಿಶಿಷ್ಟ ಉಪನ್ಯಾಸವಿತ್ತು ಮನಮುಟ್ಟುವಂತೆ ತಿಳಿಸಿರುತ್ತಾರೆ ಎಂದು ತನ್ನ ಅನುಗ್ರಹ ಭಾಷಣದಲ್ಲಿ ನುಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕೃತಿಯು ಪೂಜ್ಯರ ಸಮಗ್ರ ವ್ಯಕ್ತಿತ್ವ ಚಿತ್ರಣವನ್ನು ಈ ಕಿರು ಪ್ರತಿಯಲ್ಲಿ ಹಿಡಿದಿಟ್ಟಿರುವುದು ದೊಡ್ಡ ಸಾಹಸವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹರಸಿದರು

ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಶ್ರೀನಿವಾಸ ವರಖೇಡಿ ಆಚಾರ್ಯರು ಪೂಜ್ಯ ವಿಶ್ವೇಶತೀರ್ಥ ಗುರುಗಳನ್ನು ಹತ್ತಿರದಿಂದ ಕಂಡ ನಾರಾಯಣ ಭಟ್ ಪೂಜ್ಯರ ವ್ಯಕ್ತಿತ್ವವನ್ನು ಹಲವು ಕೋನಗಳಲ್ಲಿ ಕಂಡು ಚಿತ್ರಿಸುವ ಮೂಲಕ ಮುಂದಿನ ತಲೆಮಾರಿಗೆ ಅಧ್ಯಯನ ಯೋಗ್ಯ ಕಾರ್ಯವನ್ನು ಮಾಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ನಾರಾಯಣ ಭಟ್ ಅವರನ್ನು ಪೂಜ್ಯ ವಿಶ್ವ ಪ್ಸನ್ನ ತೀರ್ಥ ಸ್ವಾಮೀಜಿಯವರು ಶಾಲು ಹೊದಿಸಿ ಫಲಮಂತ್ರಾಕ್ಷತೆ ಸ್ಮರಣಕೆಯನ್ನು ನೀಡಿ ಆಶೀರ್ವದಿಸಿದರು.

  •  

Leave a Reply

error: Content is protected !!