ನೆಲ್ಯಾಡಿ: ನೆಲ್ಯಾಡಿ ಪರಿಸರದ ವಿವಿದ ಕ್ರೈಸ್ತ ಸಮುದಾಯಗಳ ವಾರ್ಷಿಕ ಸಮ್ಮಿಲನ ಸಂಯುಕ್ತ ಕ್ರಿಸ್ಮಸ್ ಅನ್ನು ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.
ಕ್ರೈಸ್ತ ಸಮುದಾಯಗಳ ಸಾವಿರಾರು ಮಂದಿ ವಿವಿದ ಚರ್ಚ್ ಗಳ ಸ್ಥಬ್ದ ಚಿತ್ರಗಳು, ವೈವಿಧ್ಯಮಯ ಪೋಷಾಕು, ವಾದ್ಯ ಮೇಳಗಳಿಂದ ಆಕರ್ಷಕವಾದ ಶೋಭಾ ಯಾತ್ರೆ ನೆಲ್ಯಾಡಿ ಪೇಟೆಯಿಂದ ಗಾಂಧಿ ಮೈದಾನದ ವರೆಗೆ ನಡೆಯಿತು.
ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ವಂ.ಫಾ.ಶಾಜಿ ಮಾತ್ಯು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿಕ್ಸೂಚಿ ಭಾಷಣವನ್ನು ಮಂಗಳೂರು ಅಲೋಸಿಯಸ್ ಯೂನಿವರ್ಸಿಟಿಯ ರೆ.ಡಾ.ಪ್ರವೀಣ್ ವಿಜಯ್ ಮಾರ್ಟಿಸ್ ನೀಡಿದರು. ಆಶೀರ್ವಚನವನ್ನು ಕ್ಯಾಲಿಕಟ್ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂ.ಪೌಲೋಸ್ ಮಾರ್ ಐರೇನಿಯೋಸ್ ನೀಡಿದರು.
ಸಮುದಾಯದ ವಿವಿದ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಗೈದ ಎಂಟು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಈಪನ್ ವರ್ಗೀಸ್, ಸಿ ಆರ್ ಪಿ ಎಫ್ ಕಂಮಾಂಡೆಂಟ್ ಅನ್ನಮ್ಮ ಯೇಸುದಾಸ್.ಭಾರತೀಯ ಸೇನೆಯ ಮಾತ್ಯು.ಎನ್ ಎ., ವೈದಿಕಿಯ ರಂಗದಲ್ಲಿ ಡಾ.ಆಗಸ್ಟಿನ್.ಕೆ.ಎಂ., ಶಿಕ್ಷಣ ಕ್ಷೇತ್ರದಲ್ಲಿ ಡಾ.ಜೇಕಬ್ ಜೋನ್. ಇಪ್ಪತೈದು ವರ್ಷಗಳ ಕಾಲ ಸಾಂಟಾ ಕ್ಲೋಸ್ ಡ್ರೆಸ್ ಅನ್ನು ಧರಿಸಿ ಕ್ರಿಸ್ಮಸ್ ಸಂದೇಶ ಸಾರಿದ ವಿನ್ಸೆಂಟ್ ಕೊಕ್ಕಡ ಇವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಮನೋಜ್ ಬಿಲ್ಡ್ ಟೆಕ್, ಕೋಶಾಧಿಕಾರಿ ಜಿನೋಯ್, ಜೊತೆ ಕಾರ್ಯದರ್ಶಿ ಕೆ.ಕೆ ಸೇಬಾಷ್ಟಿಯನ್, ಉಪಾಧ್ಯಕ್ಷರಾದ ವಂ.ಶಿಭು ಜೋನ್, ಸಂಯೋಜಕರಾಗಿ ವಂ. ಫಾ.ವರ್ಗಿಸ್ ಕೈಪಾನಡ್ಕ ಕಾರ್ಯನಿರ್ವಹಿಸಿದರು.