ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು

ಶೇರ್ ಮಾಡಿ

ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಗರದ ಖಾಸಗಿ ಶಾಲೆಯಲ್ಲಿ ಸೋಮವಾರ (ಜ.06) ನಡೆದಿದೆ.

ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಎಂಬುವರ ಪುತ್ರಿ ತೇಜಸ್ವಿನಿ (08) ಮೃತಪಟ್ಟ ಬಾಲಕಿ.

ನಗರದ ಸಂತ ಫ್ರಾನ್ಸಿಸ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ತೇಜಸ್ವಿನಿ ಸೋಮವಾರ ಬೆಳಗ್ಗೆ ತರಗತಿಯಲ್ಲಿ ಕುಸಿದು ಬಿದ್ದಿದ್ದಾಳೆ. ಶಾಲೆಯವರು ಆಕೆಯನ್ನು ನಗರದ ಜೆಎಸ್ಎಸ್ ಆಸ್ಪತ್ರೆ ಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಾಲಕಿ ಈಗಾಗಲೇ ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ.

  •  

Leave a Reply

error: Content is protected !!