ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನದಲ್ಲಿ ಎರಡನೇ ವಾರ್ಡಿನ 30 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಮಿಕ್ಸರ್ ಗ್ರೈಂಡರ್ ಅನ್ನು ಜ.06 ರಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ಗ್ರಾಮ ಪಂಚಾಯಿತಿನ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಅತಿಥಿಗಳಾಗಿ ಮಹಾಲಿಂಗ, ಆನಂದ ಪಡುಬೆಟ್ಟು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿನ ಸದಸ್ಯ ಮಹಮ್ಮದ್ ಇಕ್ಬಾಲ್ ಅವರು ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನದಲ್ಲಿ ಬರುವಂತ ಎಲ್ಲಾ ಅನುದಾನಗಳನ್ನು ಪ್ರಾಮಾಣಿಕವಾಗಿ ನೀಡುತ್ತಿದ್ದೇವೆ. ಅನುದಾನವನ್ನು ಪಡೆದುಕೊಂಡ ಕುಟುಂಬಗಳು ನೀಡಿದಂತಹ ವಸ್ತುಗಳನ್ನು ಸದ್ಬಳಕೆಗೆ ಉಪಯೋಗಿಸಿಕೊಳ್ಳುವಂತೆ ಹೇಳಿದರು.