ನೆಲ್ಯಾಡಿ: ಶೌರ್ಯ ಘಟಕದ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ)ಕಡಬ ತಾಲೂಕು ನೆಲ್ಯಾಡಿ ವಲಯ ಶೌರ್ಯ ಘಟಕದ ಸ್ವಯಂ ಸೇವಕರು ಕೌಕ್ರಾಡಿ ಕಟ್ಟೆಮಜಲು ಧೂಮಾವತಿ ದೈವಾಸ್ಥಾನದಲ್ಲಿ ಆವರಣದ ಸ್ವಚ್ಛತೆಯ ಕೆಲಸವನ್ನು ಮಾಡಿದರು.

ಶ್ರಮದಾನದ ನಂತರ ಮಾಸಿಕ ಸಭೆಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆಲ್ಯಾಡಿ ವಲಯದ ಪ್ರತಿನಿಧಿ ರಮೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಡಬ ತಾಲೂಕಿನ ಯೋಜನಾಧಿಕಾರಿಗಳಾದ ಮೇದಪ್ಪ ಗೌಡ.ಎನ್ ಅವರು ಶೌರ್ಯ ಸ್ವಯಂ ಸೇವಕರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿದರು. ಕಟ್ಟೆಮಜಲು ಧೂಮಾವತಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸದಾನಂದ ಗೌಡ ಕುಂಡಡ್ಕ, ಹಿರಿಯರಾದ ದಿನಕರ ರಾವ್, ಸಮಿತಿ ಪದಾಧಿಕಾರಿ ಶಶಿಧರ್ ಶೆಟ್ಟಿ ಪರಂತಮೂಲೆ, ನೆಲ್ಯಾಡಿ ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ, ಕೌಕ್ರಾಡಿ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೌರ್ಯ ಘಟಕದ ಎಲ್ಲಾ ಸ್ವಯಂ ಸೇವಕರು ಸಭೆಯಲ್ಲಿ ಭಾಗವಹಿಸಿದ್ದರು. ಶೌರ್ಯ ಘಟಕ ಸಂಯೋಜಕಿ ನಮಿತಾ.ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಟ್ಟೆಮಜಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಮನಾ ವಂದಿಸಿದರು.

  •  

Leave a Reply

error: Content is protected !!