ಕೊಕ್ಕಡ: ಶ್ರೀ ಕ್ಷೇತ್ರದ ಧರ್ಮಸ್ಥಳದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶಿಬರಾಜೆಯ ಅಂಗನವಾಡಿ ಕೇಂದ್ರ ಆವರಣ ಗೋಡೆ ರಚನೆಗೆ ಮಂಜೂರು ಮಾಡಿರುವ 30 ಸಾವಿರ ಮೊತ್ತದ ಮಂಜೂರಾತಿ ಪತ್ರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯಾದ ಸುರೇಂದ್ರ ಅವರು ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಪ್ರತಿಮಾ ಅವರಿಗೆ ಸಮಿತಿಯ ಪ್ರಮುಖರು ಹಾಗೂ ಗಣ್ಯರು ಮತ್ತು ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಹತ್ತಾಂತರಿಸಿದರು.
ಈ ಸಂದರ್ಭ ಕಳೆಂಜ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎಸ್.ನಿತ್ಯಾನಂದ ರೈ, ಗ್ರಾಮ ಪಂಚಾಯತಿಯ ಸದಸ್ಯರಾದ ಪ್ರೇಮ.ಬಿ.ಎಸ್, ಸದಾಶಿವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ರಾವ್, ಬಾಲವಿಕಾಸ ಸಮಿತಿಯ ಸದಸ್ಯರಾದ ಪಿ.ಟಿ. ಸೆಬಾಸ್ಟೀನ್, ಬಾಲ ವಿಕಾಸ ಸಮಿತಿಯ ಸದಸ್ಯರಾದ ಸೇವ್ರಿನ್, ವೇದಾವತಿ, ಕೊಕ್ಕಡ ಜೆಸಿಐ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್, ಬಾಲ ವಿಕಾಸ ಸಮಿತಿಯ ಸದಸ್ಯರಾದ ಜಯವರ್ಮ ಜೈನ್, ಪ್ರಗತಿ ಬಂದು ಸ್ವ-ಸಹಾಯಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆಯಾದ ಪ್ರಿಯ, ಅಂಗನವಾಡಿ ಸಹಾಯಕಿ ಅನ್ಸಿಲ್ಲ, ಶಿಬರಾಜೆಯ ಆಶಾ ಕಾರ್ಯಕರ್ತೆ ಮೀನಾಕ್ಷಿ, ಮೇಲ್ವಿಚಾರಕರಾದ ರವೀಂದ್ರ, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.