ಕೆದಿಲ ಗ್ರಾಮದ ಪೇರಮೊಗರುವಿನ ಸಮೀಪ ಸತ್ತಿಕಲ್ಲಿನಲ್ಲಿ ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.
ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಪುತ್ರ ಪೈಂಟರ್ ಉದ್ಯೋಗಿ ಚಪ್ಪಿ ಉಸ್ಮಾನ್(24) ಸಾವನ್ನಪ್ಪಿದವರು.
ರಾಷ್ಟ್ರೀಯ ಹೆದ್ದಾರಿಯ ಕಪೇರಮುಗೇರು ಸತ್ತಿಕಲ್ಲು ಎಂಬಲ್ಲಿ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಉಸ್ಮಾನ್ ಮೊಬೈಲಲ್ಲಿ ಮಾತನಾಡುತ್ತಿದ್ದಾಗ ನೋಂದಣಿಯಾಗದ ಕಿಯಾ ಕಾರು ಢಿಕ್ಕಿಯಾಯಿತು.
ಗಂಭೀರವಾಗಿ ಗಾಯಗೊಂಡ ಉಸ್ಮಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟರು .
ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ