ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಸಮೂಹಕ್ಕೆ ಹೊಸ ಆಡಳಿತ ಮಂಡಳಿಯನ್ನು ನೆಲ್ಯಾಡಿಯ ಮೇರಿ ಮಾತಾ ರಿಜಿಯನಲ್ ಸಭಾ ಭವನದಲ್ಲಿ ತಲಶೇರಿ ಪ್ರಾವಿನ್ಸ್ ನ ಪ್ರೊವಿಂನ್ಸಿಯಲ್ ಅವರ ಉಪಸ್ಥಿತಿಯಲ್ಲಿ ನೂತನ ತಂಡ ಆಯ್ಕೆಯನ್ನು ಪ್ರಕಟಿಸಲಾಯಿತು.
ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ.ಫಾ.ಶಾಜಿ ಮಾತ್ಯು ಪೂಜಾ ವಿಧಿಗಳನ್ನು ನೆರವೇರಿಸಿದರು. ರಿಜಿಯನಲ್ ಸುಪೀರಿಯರ್ ಆಗಿ ವಂ.ಸಿಸ್ಟರ್ ಲಿಸ್ ಮಾತ್ಯು ಸದಸ್ಯರಾಗಿ ವಂ.ಸಿಸ್ಟರ್ ರೋಸ್ನಾ.ಎಸ್.ಎಚ್, ತೆರೇಸಾ ಕುರಿಯನ್.ಎಸ್.ಎಚ್, ಎಲ್ ಸ್ಲೀಟ್.ಎಸ್.ಎಚ್ ಆಯ್ಕೆಯಾದರು. ವಂ. ಫಾ. ಶಾಜಿ ಮಾತ್ಯು ಆಯ್ಕೆಯಾದವರನ್ನು ಅಭಿನಂದಿಸಿ ಮಾತನಾಡಿದರು.