ನೇಸರ ಮಾ.03: ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆ ಮತ್ತು ಘಟಕಾಭಿವೃದ್ಧಿ ಹಾಗೂ ನಿರ್ವಹಣಾ ತರಬೇತಿ ಘಟಕ ಅಧ್ಯಕ್ಷರಾದ ಜೇಸಿ.ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆಯಲ್ಲಿ ನಡೆಯಿತು.ವಲಯ ಉಪಾಧ್ಯಕ್ಷರಾದ ಜೇಸಿ.ಜೆಎಫ್ಎಂ.ದೀಪಕ್ ಗಂಗೂಲಿ ತರಬೇತಿಯನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ವರ್ಷದ ಘಟಕ ಅಧ್ಯಕ್ಷರ ಕನಸಿನ ಯೋಜನೆಗಳಾದ, “ನಮ್ಮ ಪೂರ್ವಾಧಕ್ಷರು-ನಮ್ಮ ಹೆಮ್ಮೆ” , “ನಮ್ಮ ಜೇಸಿ-ನನ್ನ ನಾಯಕತ್ವ” ಮತ್ತು “ನಮ್ಮ ಜೇಸಿ- ನನ್ನ ಕೊಡುಗೆ” ಯೋಜನೆಗಳಿಗೆ ಚಾಲನೆ ನೀಡಲಾಯಿತು.
ದಿವಾಕರ ಶಾಂತಿನಗರ ಜೇಸಿವಾಣಿ ಉದ್ಘೋಷಿಸಿದರು.ಕಾರ್ಯದರ್ಶಿ ಜೇಸಿ.ಲವಿನಾ ಪಿಂಟೊ ಘಟಕದ ಚಟುವಟಿಕೆಗಳ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ಕುಶಾಲಪ್ಪ ತರಬೇತಿ ಅನುಭವ ಹಂಚಿಕೊಂಡರು.ಕೋಶಾಧಿಕಾರಿ ಸುರೇಶ್ ಸದಸ್ಯತ್ವ ಶುಲ್ಕದ ಕುರಿತು ಮಾಹಿತಿ ನೀಡಿದರು.ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅವನೀಶ್ ತರಬೇತಿದಾರನ್ನು ಪರಿಚಯಿಸಿದರು.ತರಬೇತಿಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ನ ಅಧ್ಯಕ್ಷರಾದ ಶ್ರೀಮತಿ ಅನೀಶಾ ಗಂಗೂಲಿ, ನಿಕಟಪೂರ್ವ ಅಧ್ಯಕ್ಷರಾದ ಜೇಸಿ.ಕೆ.ವಿಶ್ವನಾಥ್ ಕುಲಾಲ್, ಪೂರ್ವಾಧಕ್ಷರಾದ ಪ್ರಶಾಂತ್ ಕುಮಾರ್ ರೈ, ಕೇಶವ ರಂಗಾಜೆ, ಉಮೇಶ್ ಆಚಾರ್ಯ, ಹರೀಶ್ ನಟ್ಟಿಬೈಲು, ಮೋನಪ್ಪ ಪಮ್ಮನ ಮಜಲು, ರವೀಂದ್ರ ದರ್ಬೆ, ಶಶಿಧರ್ ನೆಕ್ಕಿಲಾಡಿ, ಮಹೇಶ್ ಖಂಡಿಗ, ಕುಮಾರಿ ಮಾನ್ಯ.ಆರ್. ಉಪಸ್ಥಿತರಿದ್ದರು.
—ಜಾಹೀರಾತು—