
ನೇಸರ ಮಾ.03: ನೆಲ್ಯಾಡಿ ಗ್ರಾಮದ ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಜೀದ್ ಆಲಿ ಹಾಗೂ 11 ವರ್ಷಗಳಿಂದ ಸಮಾಜ ವಿಜ್ಞಾನದ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಂಜುನಾಥ ಇವರುಗಳು ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.
⭕ ತಪ್ಪದೆ ವೀಕ್ಷಿಸಿ Subscribers ಮಾಡಿ ⭕
ಈ ಸಂದರ್ಭದಲ್ಲಿ ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಅಬ್ರಹಾಂ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಣ್ಣಿ ಯೆಲ್ತಿಮಾರ್, ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯಿತಿನ ಸದಸ್ಯರಾದ ರವಿ ಪ್ರಸಾದ್ ಶೆಟ್ಟಿ, ಯಾಕೂಬ್ ಸಲಾಂ, ಮುಖ್ಯ ಶಿಕ್ಷಕಿ ಕಮಲ, ಸಹ ಶಿಕ್ಷಕರಾದ ಹೇಮಾವತಿ, ಜಯಪ್ಪ, ಕುಶಾಲಪ್ಪ, ಸೌಮ್ಯ, ಪ್ರಭ ,ಶಾಲಾ ನಾಯಕ ಹಿತೇಶ್.ಆರ್ ಶೆಟ್ಟಿ , ಸ್ಥಳೀಯ ಗ್ರಾಮ ಪಂಚಾಯಿತಿನ ಸದಸ್ಯರಾದ ರವಿ ಪ್ರಸಾದ್ ಶೆಟ್ಟಿ, ಯಾಕೂಬ್ ಸಲಾಂ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.
—ಜಾಹೀರಾತು—

