
ನೆಲ್ಯಾಡಿ: ಊರಿನ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ ಕೆಲಸಗಳಲ್ಲಿ ಊರಿನ ಜನರು ಒಂದಾಗುತ್ತಾರೆ. ಅಂತಹ ಅದ್ಭುತ ಶಕ್ತಿ ಭಗವಂತನಿಗೆ ಇದೆ. ದೇವಸ್ಥಾನ, ದೈವಸ್ಥಾನಗಳ ಮೂಲಕ ಭಾರತದ ಭವ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವೂ ಆಗುತ್ತಿದೆ ಎಂದರು. ಸರಕಾರಗಳೂ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿವೆ. ಕೇಂದ್ರ ಸರಕಾರ ‘ಪ್ರಸಾದಂ’ ಯೋಜನೆಯ ಮೂಲಕ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ. ರಾಜ್ಯ ಸರಕಾರವೂ ಧಾರ್ಮಿಕ ದತ್ತಿ ಇಲಾಖೆ ಮೂಲಕ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿವೆ. ದೇವಸ್ಥಾನಗಳ ರಕ್ಷಣೆಗೆ ದೇವಸ್ಥಾನಗಳ ರಕ್ಷಣಾ ಮಸೂದೆಯೂ ಜಾರಿಗೆ ತಂದಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಅವರು ಮಾತನಾಡಿ, ಬಜತ್ತೂರು, ಕೊಣಾಲು, ಗೋಳಿತ್ತೊಟ್ಟು ಪರಿಸರದಲ್ಲಿ ಜೀರ್ಣೋದ್ದಾರಗೊಳ್ಳಲು ಮಹಾವಿಷ್ಣುಮೂರ್ತಿ ದೇವಸ್ಥಾನವೊಂದು ಬಾಕಿಯಾಗಿತ್ತು. ಈ ದೇವಾಲಯ ಜೀರ್ಣೋದ್ದಾರಗೊಳ್ಳಬೇಕೆಂಬುದು ಅನುವಂಶಿಕ ಆಡಳಿತ ಮೊಕ್ತೇಸರರದ್ದೂ ಕನಸು ಆಗಿತ್ತು. ಅದು ಈಗ ಸಾಕಾರಗೊಂಡಿದೆ. ಇಲ್ಲಿನ ಭಕ್ತರ ಧಾರ್ಮಿಕತೆ ಎದ್ದು ಕಾಣುತ್ತಿದೆ. ಬ್ರಹ್ಮಕಲಶೋತ್ಸವವು ಅದ್ಭುತವಾಗಿ ಮೂಡಿಬಂದಿದೆ ಎಂದರು.
ಅತಿಥಿಗಳಾಗಿದ್ದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಡಾ.ಮುರಳೀಧರ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ನೆಲ್ಯಾಡಿ, ಬೆಳಾಲು ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಶಿವಳ್ಳಿ ಸಂಪದ ಅಧ್ಯಕ್ಷ ಸುದೀಂದ್ರ ಕುದ್ವಣ್ಣಾಯ, ಉಪ್ಪಿನಂಗಡಿ ವೈದ್ಯ ಡಾ.ರಘು, ಹವ್ಯಕ ಸಂಘದ ಗುರಿಕ್ಕಾರ ಕೃಷ್ಣಪ್ರಸಾದ್ ಅಂಬಟೆಮಾರು ಸಂದರ್ಭೋಚಿತವಾಗಿ ಮಾತನಾಡಿದರು.
ಉಪ್ಪಿನಂಗಡಿ ಹೋಟೆಲ್ ಆದಿತ್ಯದ ನಾರಾಯಣ ಹೇರಳೆ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಪದ್ಮನಾಭ ಪೂಜಾರಿ ಪೆರ್ನಾರು, ಶಿಲ್ಪಿ ಅಶೋಕ್ ವಿಟ್ಲ, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಶಿವಾನಂದ ಕಾರಂತ್, ಆಹಾರ ಸಮಿತಿ ಸಂಚಾಲಕ ವಸಂತಕೃಷ್ಣ ಕಾಂಚನ, ಹೊರೆಕಾಣಿಕೆ ಮತ್ತು ಉಗ್ರಾಣ ಸಮಿತಿ ಸಂಚಾಲಕ ಪದ್ಮನಾಭ ಶೆಟ್ಟಿ ಮರಂದೆ, ಪಾರ್ಕಿಂಗ್ ಮತ್ತು ಸಂತೆ ನಿರ್ವಹಣೆ ಸಮಿತಿ ಸಂಚಾಲಕ ಲೋಕೇಶ್ ಅಗರ್ತ, ಸ್ವಚ್ಛತಾ ಸಮಿತಿ ಸಂಚಾಲಕರಾದ ರಾಮಣ್ಣ ಪೆಲತ್ತಿಮಾರ್, ಗುಲಾಬಿ ಶೆಟ್ಟಿ ಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಕ್ತಿಗೀತೆ ಬಿಡುಗಡೆ:
ಪ್ರಕಾಶ್ ಪ್ರಿಯ ನಿರ್ದೇಶನದ ಶ್ರೀ ಮಹಾವಿಷ್ಣುಮೂರ್ತಿ ದೇವರ ಕುರಿತ ಕನ್ನಡ ಭಕ್ತಗೀತೆ ‘ತಿರ್ಲೆಯ ಸಿರಿಯ ರಸ’ ಬಿಡುಗಡೆ ಮಾಡಲಾಯಿತು. ವಿವಿಧ ಸಮಿತಿಯ ಸದಸ್ಯರಾದ ನಾರಾಯಣ ಪೂಜಾರಿ ಡೆಂಬಳೆ, ಉದಯ ಪೂಜಾರಿ ಬಟ್ಲಡ್ಕ, ಲೋಕಯ್ಯ ಗೌಡ ಶಾಂತಿಮಾರು, ರಘುನಾಥ ಪಾಲೇರಿ, ಜಯರಾಮ ಶೆಟ್ಟಿ ಪಾತೃಮಾಡಿ, ಕೊರಗಪ್ಪ ಗೌಡ ಆಲಂತಾಯ, ಪ್ರಸನ್ನ ಕಾರಂತ, ಲಿಂಗಪ್ಪ ಗೌಡ ದರ್ಖಾಸು, ತಿಮ್ಮಪ್ಪ ತಿರ್ಲೆ, ಚಂದ್ರಹಾಸ ತಿರ್ಲೆ, ಕುಶಾಲಪ್ಪ ಗೌಡ ಅನಿಲ, ಉಮೇಶ್ ಆಚಾರ್ಯ ಹಲಸಿನಕಟ್ಟೆ, ಮೋಹನ ಶೆಟ್ಟಿ ಮರಂದೆ, ಚಂದ್ರಶೇಖರ ಶೆಟ್ಟಿ ಆಂಜರ, ವನಿತಾ ಅಂಬರ್ಜೆ ಅವರು ಅತಿಥಿಗಳಿಗೆ ಶಾಲುಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಯ್‍ರಾಜ್ ಸರಳಾಯ ಸ್ವಾಗತಿಸಿ, ಸಭಾನಿರ್ವಹಣಾ ಸಮಿತಿ ಸಂಚಾಲಕ ಜಯಂತ ಅಂಬರ್ಜೆ ವಂದಿಸಿದರು. ರವೀಂದ್ರ ಟಿ.ನೆಲ್ಯಾಡಿ, ತೇಜಸ್ವಿನಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವೀಣಾರಾಮಕೃಷ್ಣ ಭಟ್ ಆಂಜರ, ಉಷಾಪಾರ್ವತಿ, ಶುಭಲಕ್ಷ್ಮೀ, ವೈಶಾಲ್ಯ ಪ್ರಾರ್ಥಿಸಿದರು.
ವೈದಿಕ ಕಾರ್ಯಕ್ರಮ:
ಬೆಳಿಗ್ಗೆ ಉಷಾ:ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸ್ವಶಾಂತಿ, ಅದ್ಭುತ ಶಾಂತಿ, ಶ್ವಾನಶಾಂತಿ, ಚೋರಶಾಂತಿ ಹೋಮಾದಿಗಳು, ಮಧ್ಯಾಹ್ನ ಹೋಮದ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ಅಂಕುರ ಪೂಜೆ, ದುರ್ಗಾಪೂಜೆ, ಕುಂಭೇಶ ಕರ್ಕರೀ ಪೂಜೆ, ಅನುಜ್ಞಾ ಕಲಶ ಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಭಜನೆ:
ಬೆಳಿಗ್ಗೆ ಶಿವಾರು ಶ್ರೀ ರಾಜರಾಜೇಶ್ವರಿ ಮಹಿಳಾ ಭಜನಾ ಮಂಡಳಿ, ಗೋಳಿತ್ತೊಟ್ಟು ವಿನಾಯಕಬೆಟ್ಟ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸಂಜೆ ಪಾಂಡಿಬೆಟ್ಟು ಶಿವಗಿರಿ ಶ್ರೀ ಅಯ್ಯಪ್ಪ ಭಜನಾ ಸೇವಾ ಸಂಘ, ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮ;
ಮಧ್ಯಾಹ್ನ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ ಶ್ರೀ ರಾಮಕೃಷ್ಣ ಭಟ್ ಆಂಜರ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ನಾಟ್ಯ ವೈಭವ ನಡೆಯಿತು.





